Friday, September 29, 2023

Latest Posts

ದೆಹಲಿಯಿಂದ ವಾಪಾಸ್ ಆದ ಯಡಿಯೂರಪ್ಪ: ರಾಜ್ಯದ ವಿಚಾರ ಯಾವುದೂ ಚರ್ಚೆಯಾಗಿಲ್ಲ ಎಂದ ಮಾಜಿ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಬೆಂಗಳೂರಿಗೆ ಇಂದು ವಾಪಸಾಗಿದ್ದಾರೆ.

ಈ ವೇಳೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬಿ ಎಸ್​ ಯಡಿಯೂರಪ್ಪ ಅವರು, ದೆಹಲಿ ಸಭೆಯಲ್ಲಿ ರಾಜ್ಯದ ವಿಚಾರ ಯಾವುದೂ ಚರ್ಚೆಯಾಗಿಲ್ಲ. ಕೇವಲ ಜಿ20 ಸಕ್ಸಸ್ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದ ಯಾವ ವಿಚಾರವನ್ನೂ ಯಾರೂ ಚರ್ಚೆ ಮಾಡಿಲ್ಲ. ಕಾವೇರಿ ನೀರು ಬಿಡಬಾರದು ಎಂಬ ನಮ್ಮ ನಿಲುವು ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್​ಗೆ ನಮ್ಮ ಕಾವೇರಿ ಭಾಗದ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕು ಅಷ್ಟೇ ಎಂದು ಹೇಳಿದ್ದಾರೆ.

ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ಹೈಕಮಾಂಡ್ ನಾಯಕರ ಜೊತೆ ಯಾವುದೇ ಮಾತುಕತೆ ನಡೆಸಲಿಲ್ಲ. ಆದರೆ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!