ಹೌದು ಸಿನಿಮಾ ಸೋತಿದೆ, ಲೈಗರ್ ಬಗ್ಗೆ ಮಾತನಾಡಿದ ದೇವರಕೊಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ನಂತರ ಸಿಕ್ಕಾಪಟ್ಟೆ ಫೇಮಸ್ ಆದರು. ಅವರು ಮಾಡುವ ಎಲ್ಲಾ ಸಿನಿಮಾಗಳ ಮೇಲೂ ಜನ ನಿರೀಕ್ಷೆ ಇಡುತ್ತಿದ್ದರು. ಅಂತೆಯೇ ಸಾಲು ಸಾಲು ಹಿಟ್ ಸಿನಿಮಾಗಳನ್ನು ವಿಜಯ್ ನೀಡಿದ್ದಾರೆ.

ಆದರೆ ಬಾಲಿವುಡ್‌ನಲ್ಲಿ ವಿಜಯ್ ಮಾಡಿದ ಮೊದಲ ಸಿನಿಮಾ ಗೆಲುವು ಕಾಣಲಿಲ್ಲ. ಲೈಗರ್ ಸೋಲಿನಿಂದ ವಿಜಯ್ ವಿಚಲಿತಗೊಂಡಿದ್ದರು. ಈ ಬಗ್ಗೆ ಮಾತನಾಡಿದ ವಿಜಯ್, ಕೆಲವು ಸಿನಿಮಾ ಸೋಲುತ್ತವೆ. ಕೆಲವು ಗೆಲ್ಲುತ್ತವೆ. ಇದೆಲ್ಲದರಲ್ಲೂ ಒಂದೇ ಅಂಶ ಕಾಮನ್, ನನ್ನ ಶ್ರಮ, ಶ್ರದ್ಧೆ. ಎಲ್ಲಾ ಸಿನಿಮಾಕ್ಕೂ ನಮ್ಮ 100% ನೀಡಿರುತ್ತೇವೆ ಎಂದಿದ್ದಾರೆ.

ನೆಗೆಟಿವ್ ಹಾಗೂ ಪಾಸಿಟಿವ್ ಎರಡನ್ನೂ ನಿಭಾಯಿಸುತ್ತೇನೆ. ನೋವಾಗುತ್ತದೆ, ಇಲ್ಲ ಎಂದು ಹೇಳುವುದಿಲ್ಲ. ಆದರೆ ಮುನ್ನಡೆಯಲೇ ಬೇಕು. ಮತ್ತೆ ಉತ್ತಮ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!