Friday, June 9, 2023

Latest Posts

ನಿಮ್ಮ ಕರಾಳ ಕೃತ್ಯಗಳನ್ನ ಕಪ್ಪು ಬಟ್ಟೆಯಿಂದ ಮುಚ್ಚೋಕೆ ಸಾಧ್ಯವಿಲ್ಲ: ಅನುರಾಗ್ ಠಾಕೂರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಹುಲ್ ಗಾಂಧಿ ಪದಚ್ಯುತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು, ಸಂಸದರು ಕಪ್ಪು ಬಟ್ಟೆ ತೊಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿದ್ದು, ಕಾಂಗ್ರೆಸ್ ಕಪ್ಪು ಬಟ್ಟೆ ಧರಿಸಿದ ಮಾತ್ರಕ್ಕೆ ಅದು ಅವರ ಕರಾಳ ಕೃತ್ಯಗಳನ್ನು ಮರೆಮಾಡುವುದಿಲ್ಲ ಎಂದಿದ್ದಾರೆ. ಈಗ ಕಪ್ಪು ಬಟ್ಟೆ ಹಾಕಿದ್ದಾರೆ ಮುಂದೆ ಬ್ಲ್ಯಾಕ್ ಮಾಜಿಕ್ ಮೊರೆ ಹೋಗಬಹುದು ಎಂದಿದ್ದಾರೆ. ರಾಹುಲ್ ಗಾಂಧಿಗೆ ಅಹಂ ಹೆಚ್ಚು. ನ್ಯಾಯಾಲಯದಲ್ಲಿಯೂ ಒಬಿಸಿ ಸಮುದಾಯಕ್ಕೆ ಅವರು ಕ್ಷಮೆ ಕೋರಿಲ್ಲ. ನ್ಯಾಯಾಲಯದ ಆದೇಶವನ್ನು ಬದ್ಧವಾಗಿ ಪಾಲಿಸೋದಕ್ಕೂ ತಯಾರಿಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!