July 18, 2026
Saturday, July 18, 2026
spot_img

ನೀವು ಭಾರತದಲ್ಲಿ ಸ್ಪರ್ಧಿಸಿ, 10 ಲಕ್ಷ ಮತಗಳಿಂದ ಗೆಲ್ಲುವುದು ಗ್ಯಾರಂಟಿ: ಇಟಲಿ ಪ್ರಧಾನಿ ಮೆಲೋನಿಗೆ ಸಿಕ್ಕಿತು ಸಚಿವರ ಸಲಹೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಇಟಲಿ ಪ್ರಧಾನಿ ಮೆಲೋನಿ ಅವರಿಗೆ ಭಾರತದ ರಾಜಕೀಯದಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾಗಿ ಇಟಲಿಯ ಸಚಿವರೊಬ್ಬರು ಹೇಳಿಕೊಂಡಿರುವುದು ಇದೀಗ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.


ಭಾರತ ಪ್ರವಾಸದ ವೇಳೆ ನವದೆಹಲಿಯಲ್ಲಿ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮೆಲೋನಿ ಅವರ ಚಿತ್ರಗಳಿರುವ ಪೋಸ್ಟರ್‌ಗಳನ್ನು ಕಂಡಿದ್ದಾಗಿ ಸಚಿವರು ತಿಳಿಸಿದ್ದಾರೆ. ಆ ವೇಳೆ ತಾವು ಮೆಲೋನಿಗೆ, ನೀವು ದಿಲ್ಲಿಯಿಂದ ಚುನಾವಣೆಗೆ ನಿಂತರೆ 10 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೀರಿ ಎಂದು ಹಾಸ್ಯಮಿಶ್ರಿತವಾಗಿ ಹೇಳಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:


ಈ ಹೇಳಿಕೆ ಭಾರತ-ಇಟಲಿ ಸಂಬಂಧಗಳ ಕುರಿತು ನಡೆದ ಚರ್ಚೆಯ ವೇಳೆ ಹೊರಬಂದಿದ್ದು, ಮೆಲೋನಿ ಅವರಿಗೆ ಭಾರತದಲ್ಲಿ ದೊರೆತ ಜನಪ್ರಿಯತೆಯನ್ನು ಉಲ್ಲೇಖಿಸುವ ಉದ್ದೇಶ ಹೊಂದಿತ್ತು. ಕಳೆದ ಕೆಲವು ವರ್ಷಗಳಲ್ಲಿ ಮೋದಿ-ಮೆಲೋನಿ ಭೇಟಿಗಳು, ಜಿ20 ಶೃಂಗಸಭೆ ಹಾಗೂ ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಇಬ್ಬರು ನಾಯಕರ ಸ್ನೇಹಪರ ಸಂವಹನ ಸಾಕಷ್ಟು ಗಮನ ಸೆಳೆದಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !