Saturday, August 20, 2022

Latest Posts

ಪ್ರೀತಿ‌ ಮಾಡಿದ ತಪ್ಪಿಗೆ ಯುವಕನ‌ ಕೊಲೆ: ಯುವತಿ ಕಡೆಯವರ ಮೇಲೆ ಶಂಕೆ

ಹೊಸದಿಗಂತ ವರದಿ, ಕಲಬುರಗಿ:

ಪ್ರೀತಿ ಪ್ರೇಮ ಅಂತ ಯುವತಿ ಹಿಂದೆ ಬಿದ್ದಿದ್ದ ಯುವಕನನ್ನ ಹತ್ಯೆಗೈದಿರುವ ಘಟನೆ ಅಫಜಲಪುರ ತಾಲೂಕಿನ ರೇವೂರು ಗ್ರಾಮದ ಬಳಿ ನಡೆದಿದೆ.

ಹುಲ್ಲೂರು ಗ್ರಾಮದ ನಿವಾಸಿ ಚಂದ್ರಪ್ಪ (24) ಕೊಲೆಯಾದ ಯುವಕ. ಕಳೆದ ಕೇಲದಿನಗಳಿಂದ ಯುವತಿಯನ್ನ ಪ್ರೀತಿ ಮಾಡುತ್ತಿದ್ದ ಚಂದ್ರಪ್ಪ ಯುವತಿಯನ್ನ ಹಲವಡೆ ಸೂತ್ತಾಡಿಸಿದ್ದನ್ನು ಎನ್ನಲಾಗಿದೆ.

ಇವರ ಪ್ರೀತಿ ಬಗ್ಗೆ ಸುದ್ದಿ ತಿಳಿದ ಯುವತಿಯ ಪೊಷಕರು ಕರೆದು ಬುದ್ಧಿವಾದ ಹೇಳಿದ್ರಂತೆ, ಅದ್ರೂ ಬಿಡದ ಚಂದ್ರಪ್ಪ ತನ್ನ ಪ್ರೀತಿ ಪ್ರಲಾಪ ಮುಂದುಚರೆಸಿದ್ದನಂತೆ ಇದರಿಂದಾಗಿ ರೊಚ್ಚಿಗೆದ್ದ ಯುವತಿ ಕಡೆಯವರು ಚಂದ್ರಪ್ಪನ ಕೊಲೆಗೈದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಕುರಿತು ರೇವೂರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ನಂತರವಷ್ಟೆ ಕೊಲೆಗೆ‌ ನಿಖರ ಕಾರಣ ತಿಳಿದುಬರಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!