April 15, 2026
Wednesday, April 15, 2026
spot_img

ಮತ್ತೆ ಶಾಲೆಯತ್ತ ಮುಖ ಮಾಡಿದ ಯಂಗ್ ಟೈಗರ್: CBSE ಬೋರ್ಡ್ ಎಕ್ಸಾಮ್ ಗೆ ಸೂರ್ಯವಂಶಿ ರೆಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಕ್ರೀಡಾಂಗಣದಲ್ಲಿ ಅಬ್ಬರಿಸಿದ ಬಳಿಕ ಈಗ ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ. ಕಡಿಮೆ ವಯಸ್ಸಿನಲ್ಲೇ ಅನೇಕ ಶತಕಗಳನ್ನು ಬಾರಿಸಿ ಎಲ್ಲರ ಗಮನ ಸೆಳೆದಿರುವ ಈ ಪ್ರತಿಭಾವಂತ ಆಟಗಾರ ಈಗ ವಿದ್ಯಾಭ್ಯಾಸಕ್ಕೂ ಸಮಾನ ಮಹತ್ವ ನೀಡುತ್ತಿದ್ದಾರೆ. ಈ ಬಾರಿ ಅವರು ಶಾಲೆಗೆ ಹೋಗುತ್ತಿರುವುದು ಪರೀಕ್ಷೆ ಬರೆಯಲು ಎಂಬುದು ವಿಶೇಷ.

ಅಂಡರ್ 19 ವಿಶ್ವಕಪ್ ಗೆಲುವಿನ ಬಳಿಕ ವಿಶ್ರಾಂತಿಯಲ್ಲಿ ಇದ್ದ ವೈಭವ್, ಫೆಬ್ರವರಿ 17, 2026 ರಿಂದ ಆರಂಭವಾಗುವ 10ನೇ ತರಗತಿ ಮಂಡಳಿ ಪರೀಕ್ಷೆಗೆ ಸಜ್ಜಾಗಿದ್ದಾರೆ. ಬಿಹಾರದ ಸಮಸ್ತಿಪುರದಲ್ಲಿರುವ ಶಾಲೆಯಲ್ಲಿ ಓದುತ್ತಿರುವ ಅವರು ಸಾಮಾನ್ಯ ವಿದ್ಯಾರ್ಥಿಯಂತೆ ಯಾವುದೇ ವಿಶೇಷ ಸೌಲಭ್ಯವಿಲ್ಲದೆ ಪರೀಕ್ಷೆ ಬರೆಯಲಿದ್ದಾರೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ. ಒಟ್ಟು 5 ವಿಷಯಗಳಲ್ಲಿ ಅವರು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಇದನ್ನೂ ಓದಿ:

ಪರೀಕ್ಷೆ ಮುಗಿದ ತಕ್ಷಣ ಮತ್ತೆ ಕ್ರೀಡಾಂಗಣಕ್ಕೆ ಮರಳಲಿರುವ ವೈಭವ್, ಮಾರ್ಚ್ 26 ರಿಂದ ಆರಂಭವಾಗುವ ಪ್ರಮುಖ ಲೀಗ್ ಪಂದ್ಯಗಳಿಗೆ ಸಿದ್ಧರಾಗಲಿದ್ದಾರೆ. ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ್ದ ಅವರು, ಈ ಬಾರಿ ಇನ್ನಷ್ಟು ಮಿಂಚಿ ಮುಂದಿನ ಹಂತದಲ್ಲಿ ರಾಷ್ಟ್ರೀಯ ತಂಡದ ಅವಕಾಶ ಪಡೆಯುವ ನಿರೀಕ್ಷೆ ಮೂಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !