ʻಗಾರ್ಬೇಕ್‌ ಬ್ಯಾಂಕ್‌ʼ ಮೂಲಕ ತ್ಯಾಜ್ಯ ಮರುಬಳಕೆ: ಯುವಕರಿಂದ ವಿನೂತನ ಪ್ರಯತ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುವರಕ ಗುಂಪೊಂದು ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ‘ಗಾರ್ಬೇಜ್ ಬ್ಯಾಂಕ್’ ಸ್ಥಾಪಿಸಿ ಇದರ ಮೂಲಕ ಪ್ರಾಥಮಿಕವಾಗಿ ತ್ಯಾಜ್ಯ ವಿಂಗಡಣೆ, ಮರುಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡಿದ್ದಾರೆ. 2 ವರ್ಷಗಳ ಹಿಂದಿನಿಂದಲೂ ಈ ಕೆಲಸ ನಿರ್ವಹಿಸಿಕೊಂಡು ಬಂದಿದ್ದು, ಇದುವರೆಗೂ 43,000 ಕೆಜಿ ಮೌಲ್ಯದ ತ್ಯಾಜ್ಯವನ್ನು ಮರುಬಳಕೆ ಮಾಡಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಗೃಹಿಣಿಯರು ಮತ್ತು ಸಾರ್ವಜನಿಕರಿಗೆ ತ್ಯಾಜ್ಯ ನಿರ್ವಹಣೆ ಕುರಿತು ಸುಮಾರು 130 ಕ್ಕೂ ಹೆಚ್ಚು ಜಾಗೃತಿ ಸಮಾವೇಶಗಳನ್ನು ನಡೆಸಿದ್ದಾರೆ.

ವಿರುಧುನಗರದಲ್ಲಿ 500ಕ್ಕೂ ಹೆಚ್ಚು ಕುಟುಂಬಗಳು ತ್ಯಾಜ್ಯ ವಿಂಗಡಣೆಯ ಕೆಲಸದಲ್ಲಿ ತೊಡಗಿವೆ. ಇಲ್ಲಿವರೆಗೆ 43,367 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರನ್ನು ಎರಡು ಬಾರಿ ನೋಂದಾಯಿಸಿದ್ದಾರೆ. ತ್ಯಾಜ್ಯ ವಿಂಗಡನೆ, ಮರುಬಳಕೆಯಿಂದ ಹಿಡಿದು ಕಸಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗೆ ಈ ಬ್ಯಾಂಕು ಪರಿಹಾರ ನೀಡುತ್ತದೆ.

ವಿವಿ ವನ್ನಿಯಾಪೆರುಮಾಳ್ ಕಾಲೇಜಿನ ಪ್ರಾಧ್ಯಾಪಕಿ ರೇವತಿ ರಾಜಶೇಖರನ್ ಈ ಬ್ಯಾಂಕಿನ ಕುರಿತು ಮಾತನಾಡಿದ್ದು, ʻನಮ್ಮ ಕಾಲೇಜಿನಲ್ಲಿ ಜೈವಿಕ ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಕಾಗದ ತ್ಯಾಜ್ಯಕ್ಕಾಗಿ ಪ್ರತಿ ತರಗತಿಯಲ್ಲಿ ಮೂರು ಡಸ್ಟ್‌ಬಿನ್‌ ಇಡಲಾಗಿದೆ. ಇಡೀ ಕಾಲೇಜಿನಿಂದ ಸಂಗ್ರಹವಾದ ಕಸದ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಇದನ್ನು ಸರಿಪಡಿಸಲು ನಾವು ʻಗಾರ್ಬೇಜ್ ಬ್ಯಾಂಕ್ʼ ಸಂಪರ್ಕಿಸಿದ ಬಳಿಕ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆಯಿಂದ ಕಸದ ಸಮಸ್ಯೆ ನಿರ್ಮೂಲನೆಯಾಗಿದೆ ಎಂದರು

ಈ ಬ್ಯಾಂಕ್ ಜನರಿಂದ ಪಡೆಯುವ ಕಸಕ್ಕೆ ಕಿಲೋಗೆ 6 ರೂಪಾಯಿಗಳನ್ನು ಪಾವತಿ ಮಾಡಿ ತ್ಯಾಜ್ಯ ರಸ್ತೆಗೆಸೆಯುವ ಜನರ ಮನಸ್ಥಿತಿಯನ್ನು ಬದಲಾವಣೆ ಮಾಡಿದೆ. ರಸ್ತೆಗೆ ಎಸೆಯುವ ಕಸವನ್ನು ನಾನು ಕಸದ ಬ್ಯಾಂಕ್‌ಗೆ ನೀಡಿ ತಿಂಗಳಿಗೆ 300 ರೂಪಾಯಿ ಗಳಿಸುತ್ತಿದ್ದೇನೆ. ಇದರಿಂದ ಪರಿಸರಕ್ಕೆ ಹಾನಿಯಾಗದಂತೆ ತ್ಯಾಜ್ಯ ಮರುಬಳಕೆ ಮಾಡಬಹುದು ಇದೊಂದು ಅದ್ಭುತ ಪ್ರಕ್ರಿಯೆ ಎಂದು ಸ್ಥಳೀಯ ಮಹಿಳೆ ಪ್ರಿಯಾ ಅಭಿಪ್ರಾಯ ಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!