ನಾವು ಹೆದರಲ್ಲ ಅಂತ ಹೇಳುತ್ತಲೇ ಓಡಿಹೋದ ಯೂಥ್ ಕಾಂಗ್ರೆಸ್ ಶ್ರೀನಿವಾಸ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿನಿರ್ದೇಶನಾಲಯ( ಇಡಿ) ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ವಿಚಾರಣೆಗೆ ಕರೆದಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಪೊಲೀಸರಿಂದ ತಪ್ಪಿಸಿಕೊಳ್ಳಲು ಸ್ಥಳದಿಂದ ಓಡಿಹೋಗಿ ನಗೆಪಾಟಲಿಗೀಡಾಗಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತಮ್ಮ ನಾಯಕ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಒಳಪಡಿಸುವುದನ್ನು ವಿರೋಧಿಸಿ ಕೈ ಮುಖಂಡರು ಮತ್ತು ಕಾರ್ಯಕರ್ತರು ಇಡಿ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸುತ್ತಿದ್ದರು. ರಾಹುಲ್‌ ರನ್ನು ಕಾನೂನಾತ್ಮಕ ಪ್ರಕ್ರಿಯೆ ಸಂಬಂಧ ವಿಚಾರಣೆಗೆ ಕರೆಸಲಾಗಿದ್ದರಿಂದ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ.
ಈ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ವೀರಾವೇಶದಿಂದ ಉತ್ತರಿಸಿದ್ದ ಶ್ರೀನಿವಾಸ್‌, ನಾವು ಹೆದರಲ್ಲ, ಪೊಲೀಸರು ಅನುಮತಿಸದಿದ್ದರೂ ಪ್ರತಿಭಟನೆ ನಡೆಸಿಯೆ ಸಿದ್ದ ಎಂದ ಅಬ್ಬರಿಸಿದ್ದರು. ಮತ್ತೆ ಪ್ರತಿಭಟನೆಗೆ ಮುಂದಾದ ಕೆಲ ಸಮಯದಲ್ಲಿಯೆ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅದಾಗಲೇ ಕಾರು ಹತ್ತಿ ಹೊರಡಲು ಸಜ್ಜಾಗಿದ್ದ ಶ್ರೀನಿವಾಸ್‌ ತನ್ನನ್ನು ಬಂಧಿಸಲು ಆಗಮಿಸಿದ ಪೊಲೀಸರನ್ನು ಪಕ್ಕಕ್ಕೆ ತಳ್ಳಿ ತಪ್ಪಿಸಿಕೊಂಡು ವೇಗವಾಗಿ ಓಡಿಹೋಗಿದ್ದಾರೆ!.

ಯೂತ್‌ ಕಾಂಗ್ರೆಸ್‌ ಅಧ್ಯಕ್ಷನ ಪರಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿ ನಗುವಿನ ಅಲೆಯನ್ನೇ ಸೃಷ್ಟಿಸುತ್ತಿದ್ದು ನೆಟ್ಟಿಗರು ಬಗೆಬಗೆಯ ಮಿಮ್ಸ್‌, ಫನ್ನಿ ಕಾಮೆಂಟ್ ಗಳನ್ನು ಹಂಚಿಕೊಳ್ಳುವ ಮೂಲಕ ಕೈ ನಾಯಕನ ವರ್ತನೆಯನ್ನು ಗೇಲಿ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!