Thursday, March 30, 2023

Latest Posts

ಶ್ರೀರಂಗಪಟ್ಟಣದಲ್ಲಿ ದುಷ್ಕರ್ಮಿಗಳಿಂದ ಯುವಕನ ಕತ್ತು ಕೊಯ್ದು ಭೀಕರ ಹತ್ಯೆ

ಹೊಸದಿಗಂತ ವರದಿ, ಶ್ರೀರಂಗಪಟ್ಟಣ :

ದುಷ್ಕರ್ಮಿಗಳ ಗುಂಪೊಂದು ಯುವಕನನ್ನು ಅಟ್ಟಾಡಿಸಿ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕಾರೇಕುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವಪ್ರಸಾದ್ ಪುತ್ರ ಸಾಗರ್ (29) ಕೊಲೆಯಾದ ಯುವಕ. ಕಾರೇಕುರ ಹೊರವಲಯದಲ್ಲಿ ಗ್ರಾಮಕ್ಕೆ ತೆರಳುವ ರಸ್ತೆ ಪಕ್ಕದ ಕೃಷಿ ಜಮೀನಿನ ಕಿರುನಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಾಗರ್‌ನ ಶವ ಮಾರಾಕಾಸಗಳಿಂದ ಕೊಚ್ಚಿ ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿತ್ತು ಇದನ್ನು ಕಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ಅನುಕೂಲಸ್ಥ ಕುಟುಂಬದವನಾದ ಸಾಗರ್ ತಮ್ಮ ಕೃಷಿ ಜಮೀನಿನ ಕೆಲಸದೊಂದಿಗೆ ಕೋಳಿ ಾರಂ ನಿರ್ವಹಣೆ ಮಾಡಿಕೊಂಡಿದ್ದಘಿ. ಕಳೆದ 2020ರಲ್ಲಿ ವಿವಾಹ ಮಾಡಿಕೊಂಡಿದ್ದಘಿ. ಗುರುವಾರ ಸಂಜೆ ಕಾರ‌್ಯನಿಮಿತ್ತ ಮನೆಯಿಂದ ಹೊರ ಹೋಗಿದ್ದುಘಿ, ರಾತ್ರಿ 9.30ರ ಸಮಯದಲ್ಲಿ ಮನೆಗೆ ಬರುವುದಾಗಿ ದೂರವಾಣಿ ಕರೆ ಮಾಡಿ ತಿಳಿಸಿದ್ದಘಿ.
ಆದರೆ, ತಡರಾತ್ರಿಯಾದರೂ ಮಗ ಮನೆಗೆ ಬಾರದಿದ್ದನ್ನು ಕಂಡು ತಂದೆ ಹಾಗೂ ಪತ್ನಿ ಆತಂಕಗೊಂಡಿದ್ದರು. ಎಲ್ಲೋ ಹೊರಗೆ ಹೋಗಿರಬಹುದೆಂದು ತಿಳಿದು ಮಲಗಿದ್ದರು. ಆದರೆ ಮುಂಜಾನೆ ಸಾಗರ್ ಸಾವು ಅವರಿಗೆ ಬರಸಿಡಿಲು ಬಡಿದಂತಾಗಿತ್ತುಘಿ.
ಸುದ್ಧಿ ತಿಳಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಅಪರ ಅಧೀಕ್ಷಕ ವೇಣುಗೋಪಾಲ್, ಡಿವೈಎಸ್ಪಿ ಸಂದೇಶ್‌ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಪುನೀತ್, ವಿವೇಕಾನಂದ, ಪಿಎಸ್‌ಐ ರೇಖಾ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ದುಷ್ಕರ್ಮಿಗಳು ಬಿಸಾಡಿದ್ದ ಮಾರಕಾಸವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದುಘಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!