ಯುವಜನೋತ್ಸವ: ಮೈನವಿರೇಳಿಸಿದ ಸ್ವದೇಶಿ ಸಮರ ಕ್ರೀಡೆಗಳು!

ಹೊಸದಿಗಂತ ವರದಿ,ಧಾರವಾಡ:

ಝಳಪಿಸುವ ಕತ್ತಿಗಳು, ಕೊಡಲಿ ಯುದ್ಧ, ದಂಡಯುದ್ಧ, ಮಲ್ಲಯುದ್ಧ, ನಿಯುದ್ಧ, ವೀರಾವೇಷದಿಂದ ಹೋರಾಡಿದ ಕ್ರೀಡಾಪಟುಗಳು, ಮೈನವಿರೇಳಿಸುವ ಸಾಹಸಗಳು ಎಲ್ಲವೂ ನೆರೆದ ಸಭಿಕರಿಗೆ ಹೊಸ ಅನುಭವ ಉಣಬಡಿಸಿತು.

ನಗರದಲ್ಲಿ ನಡೆಯುತ್ತಿರುವ 26ನೇ ಯುವಜನೋತ್ಸವದ ಭಾಗವಾಗಿ ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಸ್ವದೇಶಿ ಆಟಗಳ ಪ್ರದರ್ಶನಕ್ಕೆ ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಚಾಲನೆ ನೀಡಿದರು.

ಪಂಜಾಬನ ಗಟ್ಕಾ, ಕೇರಳದ ಕಲರಿಪಯಟ್ಟು, ತಮಿಳುನಾಡಿನ ಸಿಲಂಬಮ್, ಮಣಿಪುರದ ಮುಕ್ನಾ ಹಾಗೂ ಥಂಗ್ಟಾ, ಆಸ್ಸಾಂನ ಖೊಮ್ಲೈನಿ ಕ್ರೀಡೆಗಳು ಪ್ರದರ್ಶನಗೊಂಡವು. ಮಹಾರಾಷ್ಟ್ರದ ಸೈಕಲ್ ಮಲ್ಲಕಂಬ, ರೋಪ್ ಮಲ್ಲಕಂಬ ಹಾಗೂ ಕರ್ನಾಟಕದ ಮಲ್ಲಕಂಬ ವಿಶೇಷ ಗಮನ ಸೆಳೆಯಿತು.

ಕ್ರೀಡಾಂಗಣದ ಇನ್ನೊಂದೆಡೆ ಕಬ್ಬಡ್ಡಿ, ಲಗೋರಿ, ಬುಗುರಿ, ಗೋಲಿ ಮುಂತಾದ ಸ್ವದೇಶಿ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಹಾಗೂ ಜನತೆ ಭಾಗವಹಿಸಿ ಹರ್ಷಗೊಂಡರು. ಇದಕ್ಕೂ ಪೂರ್ವದಲ್ಲಿ ಎಲ್ಲ ರಾಜ್ಯಗಳ ಕ್ರೀಡಾ ತಂಡದಿಂದ ಪರೇಡ್ ನಡೆಯಿತು. ಜ. 16ರ ವರೆಗೆ ಪ್ರತಿದಿನ‌ ಮಧ್ಯಾಹ್ನ 2:30ರಿಂದ ಈ ಸ್ವದೇಶಿ ಕ್ರೀಡೆಗಳು ಪ್ರದರ್ಶನಗೊಳ್ಳಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!