October 12, 2026
Monday, October 12, 2026
spot_img

ಜಮೀರ್‌ ಅಹ್ಮದ್‌ ಆಡಿಯೋ ವೈರಲ್‌, ಇದು ನಾನಲ್ಲ ಎಐ ಎಂದ ಕಾಂಗ್ರೆಸ್‌ ನಾಯಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಕೆಲವು ಮೀಡಿಯಾಗಳು ನನ್ನದು ಅಂತ ಹೇಳಲಾದ ಆಡಿಯೋನ ವೈರಲ್‌ ಮಾಡಿವೆ. ಆದರೆ ಇದು ನನ್ನ ದನಿ ಅಲ್ಲ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಕೆ ಮಾಡಿ ಸೃಷ್ಟಿಸಿರೋ ಆಡಿಯೋ ಎಂದು ಕಾಂಗ್ರೆಸ್‌ ನಾಯಕ ಜಮೀರ್‌ ಅಹ್ಮದ್‌ ಹೇಳಿದ್ದಾರೆ.

ರಾಜಕೀಯದಲ್ಲಿ ಪರ ವಿರೋಧ ಮಾತುಕತೆ ಇದ್ದರೆ ಚಂದ. ಆದರೆ ಈ ರೀತಿ ಷಡ್ಯಂತ್ರ ಮಾಡೋಕೆ ಅಸಹ್ಯಕರ. ಆಡಿಯೋ ಅಪ್‌ಲೋಡ್‌ ಮಾಡಿದವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನನ್ನ ದನಿಯಲ್ಲಿ ಮಾತನಾಡಿ ಗೊಂದಲ ಸೃಷ್ಟಿ ಮಾಡಿದಾರೆ. ಇದನ್ನೆಲ್ಲಾ ಯಾರೂ ನಂಬಬೇಡಿ. ಕಿಡಿಗೇಡಿಗಳ ಮಾತಿಗೆ ಯಾಕೆ ಬೆಲೆ ಕೊಡ್ತೀರಿ? ಈ ಆಡಿಯೋ ಬಗ್ಗೆ ತನಿಖೆ ಮಾಡಲಿ ನನಗೆ ಯಾವ ಭಯವೂ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್‌ ಮುಖಂಡ ಜಮೀರ್ ಅಹಮದ್‌ ವಿರುದ್ಧ ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಪೂರಕವಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಕ್ರೋಚ್ ಪಾರ್ಟಿ ಹೆಸರಿನ ಎಕ್ಸ್‌ನಲ್ಲಿ ಆಡಿಯೋ ರಿಲೀಸ್ ಆಗಿದೆ. ದಾವಣಗೆರೆಯ ಕಾಂಗ್ರೆಸ್ ಮುಖಂಡ ಸಿರಾಜ್ ಜೊತೆ ಜಮೀರ್ ಅಹಮ್ಮದ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ. ಆಡಿಯೋದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಮಾತನಾಡಲಾಗಿದೆ.

Must Read