‌ಡಾನ್‌ಬಾಸ್‌ ಪ್ರಾಂತ್ಯದ ಮೇಲೆ ರಷ್ಯಾ ದಾಳಿ, 8ನಾಗರೀಕರ ಹತ್ಯೆ

ಹೊಸದಿಗಂತ ದಿಜಿಟಲ್‌ ಡೆಸ್ಕ್:‌ 

ಉಕ್ರೇನ್ ಹಾಗೂ ರಷ್ಯಾ ನಡುವಿನ ದಾಳಿ ಮುಂದುವರೆದಿದೆ. ಇದೀಗ ರಷ್ಯಾ ತನ್ನ ಸೇನೆಯನ್ನು ಉಕ್ರೇನ್‌ನ ಪೂರ್ವ ಭಾಗವನ್ನು ಕೇಂದ್ರೀಕರಿಸಿ ದಾಳಿ ನಡೆಸುತ್ತಿವೆ. ಡಾನ್‌ ಬಾಸ್‌ ಪ್ರದೇಶದಲ್ಲಿ ರಷ್ಯಾ ದಾಳಿ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಸ್ಪಷ್ಟಪಡಿಸಿದ್ದು‌, ಡಾನ್‌ಬಾಸ್‌ ಮೇಲೆ ಯುದ್ಧ ನಡೆಸಲು ಪುಟಿನ್‌ ಸೇನೆ ದೀರ್ಘಕಾಲದ ತಯಾರಿ ನಡೆಸಿ, ಇದೀಗ ತನ್ನ ಹೆಚ್ಚಿನ ಸೇನೆಯನ್ನು ಈ ಭಾಗದ ಆಕ್ರಮಣಕ್ಕೆ ನಿಯೋಜಿಸಿದ್ದಾರೆ ಎಂದಿದ್ದಾರೆ.

ರಷ್ಯಾ ವಿರುದ್ಧ ಹೋರಾಡಲು ನಾವು ಶತಸಿದ್ಧ. ಅದೆಷ್ಟೇ ಸೇನೆ ಬಂದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎಂಬ ಆತ್ಮವಿಶ್ವಾಸವನ್ನು ಝಲೆನ್ಸ್ಕಿ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಪೂರ್ವ ಲುಗಾನ್ಸ್ಕ್ ಪ್ರದೇಶದ ಪ್ರಾದೇಶಿಕ ಗವರ್ನರ್ ಸೆರ್ಗಿ ಗೈಡೆ ಕೂಡ ರಷ್ಯಾದ ಬಹು ನಿರೀಕ್ಷಿತ ದಾಳಿ ಮಾಡಿದೆ ಎಂಬುದನ್ನು ಘೋಷಿಸಿದರು. ಒಂದು ವಾರದ ಹಿಂದೆಯೇ ಡಾನ್‌ಬಾಸ್‌ ಪ್ರದೇಶದ ಮೇಲೆ ರಷ್ಯಾ ದಾಳಿ ಮಾಡುವ ಬಗ್ಗೆ ಉಕ್ರೇನ್‌ ಊಹಿಸಿತ್ತು ಎಂದಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ರಷ್ಯಾದ ಶೆಲ್ ದಾಳಿಯಿಂದಾಗಿ ಸೋಮವಾರ ಪೂರ್ವ ಉಕ್ರೇನ್‌ನಲ್ಲಿ ಕನಿಷ್ಠ ಎಂಟು ನಾಗರೀಕರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!