ರಾಯಭಾರ ಕಚೇರಿಯಲ್ಲಿ ಕಿರುಕುಳ: ಭಾರತೀಯ ಮಹಿಳೆ ಕಷ್ಟಕ್ಕೆ ಸ್ಪಂದಿಸಿದ ಪಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯಲ್ಲಿರುವ ತನ್ನ ರಾಯಭಾರಿ ಕಚೇರಿಯಲ್ಲಿ ಭಾರತೀಯ ಮಹಿಳಾ ಪ್ರೊಫೆಸರ್ ಜೊತೆ ಹಿರಿಯ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಕ್ಕೆ ಪಾಕಿಸ್ತಾನ ಪ್ರತ್ಯುತ್ತರ ನೀಡಿದೆ. ಈ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರೆ ಮುಮ್ತಾಜ್ ಜಹ್ರಾ ಬಲೂಚ್ ಹೇಳಿಕೆ ನೀಡಿದ್ದಾರೆ.

“ನಮ್ಮ ಕಚೇರಿಗಳಲ್ಲಿ ಅಧಿಕಾರಿಗಳು ಯಾರ ವಿರುದ್ಧವಾದರೂ ಅನುಚಿತವಾಗಿ ವರ್ತಿಸಿದರೆ, ನಾವು ಆ ಕ್ರಮಗಳನ್ನು ನಿರ್ಲಕ್ಷಿಸುವುದಿಲ್ಲ. ನಾವು ಇತ್ತೀಚಿನ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಆದರೆ, ಈಗ ಅಧಿಕಾರಿಗಳ ಅನುಚಿತ ವರ್ತನೆ ವಿಚಾರ ಪ್ರಸ್ತಾಪವಾಗಿರುವುದು ಅಚ್ಚರಿ ಮೂಡಿಸಿದೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಬಲವಾದ ವ್ಯವಸ್ಥೆ ಇದೆ,’’ ಎಂದರು.

ವೀಸಾ ಅರ್ಜಿದಾರರಿಗೆ ಆದ್ಯತೆ ನೀಡುವ ಮತ್ತು ಸೌಜನ್ಯದಿಂದ ವರ್ತಿಸುವ ಮಾರ್ಗಸೂಚಿಗಳನ್ನು ಪಾಕಿಸ್ತಾನ ಅನುಸರಿಸುತ್ತದೆ ಎಂದು ಅವರು ಹೇಳಿದರು. ತಮ್ಮ ರಾಯಭಾರ ಕಚೇರಿಗಳು ಸೌಜನ್ಯದಿಂದ ಹೇಗೆ ವರ್ತಿಸಬೇಕು ಎಂಬುದರ ಕುರಿತು ಸ್ಪಷ್ಟ ಸೂಚನೆಗಳನ್ನು ಹೊಂದಿವೆ ಎಂದರು.

ಏನಿದು ಘಟನೆ?

ಪಂಜಾಬ್‌ನ ಮಹಿಳಾ ಪ್ರಾಧ್ಯಾಪಕರೊಬ್ಬರು 2021 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲು ವೀಸಾಕ್ಕಾಗಿ ಅರ್ಜಿ ಸಲ್ಲಿಸಲು ಪಾಕಿಸ್ತಾನಿ ರಾಯಭಾರ ಕಚೇರಿಗೆ ಹೋಗಿದ್ದರು, ಆದರೆ ಅಲ್ಲಿನ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಸಿಬ್ಬಂದಿ ಅವರಿಗೆ ತೊಂದರೆ ಕೊಡುವಂತಹ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದರು ಎಂದು ಮಹಿಳೆ ದೂರಿದ್ದಾರೆ.

ನೀವು ಯಾಕೆ ಮದುವೆಯಾಗಿಲ್ಲ?  ಮದುವೆಯಾಗದೆ ಬದುಕುವುದು ಹೇಗೆ ಎಂದರು. ನನ್ನ ಲೈಂಗಿಕ ಬಯಕೆಗಳನ್ನು ಪೂರೈಸಿಕೊಳ್ಳಲು ನಾನು ಏನು ಮಾಡುತ್ತೇನೆ? ಎಂದು ಅಧಿಕಾರಿಯೊಬ್ಬರು ಕೇಳಿದ್ದರು. ಅಲ್ಲದೆ ನನ್ನಲ್ಲಿ ಲೈಂಗಿಕತೆಯ ಬೇಡಿಕೆ ಇಟ್ಟಿದ್ದರು ಎಂಬುದಾಗಿ ಮಹಿಳೆ ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದರು. ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಈ ಕುರಿತು ಪತ್ರವನ್ನೂ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!