20 ಶೇಕಡಾ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಝೆಸ್ಟ್‌ ಮನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು ಮೂಲದ ಕಂಪನಿ ಝೆಸ್ಟ್‌ ಮನಿ ತನ್ನ ಒಟ್ಟಾರೆ ಉದ್ಯೋಗಿಗಳಲ್ಲಿ 20 ಶೇಕಡಾ ಉದ್ಯೋಗಿಗಳನ್ನು ವಜಾಗೊಳಿಸಲಿದೆ. ಇತ್ತೀಚೆಗಷ್ಟೆ ಭಾರತೀಯ ಮೂಲದ ಫಿನ್‌ಟೆಕ್‌ ಕಂಪನಿ ಫೋನ್‌ ಪೇ ಯೊಂದಿಗೆ ಸ್ವಾಧೀನ ಒಪ್ಪಂದ ಫಲಪ್ರದವಾಗದ ಹಿನ್ನೆಲೆಯಲ್ಲಿ ಕಂಪನಿಯು ಈ ನಿರ್ಧಾರ ಕೈಗೊಂಡಿದೆ ಎಂದು ಲೈವ್‌ ಮಿಂಟ್‌ ವರದಿ ಮಾಡಿದೆ. ಈ ನಿರ್ಧಾರವು ಕಂಪನಿಯ ಸುಮಾರು 100 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.

ಗೋಲ್ಡ್‌ ಮ್ಯಾನ್‌ ಸ್ಯಾಚ್ಸ್‌, ಕ್ಸಿಯೋಮಿ ಕಂಪನಿಗಳ ಬೆಂಬಲ ಹೊಂದಿರುವ ಝೆಸ್ಟ್‌ ಮನಿ ಕಂಪನಿಯು 450 ಉದ್ಯೋಗಿಗಳನ್ನು ಹೊಂದಿದೆ. ಈ ಹಿಂದೆ ನವೆಂಬರ್‌ 2022ರಲ್ಲಿ  ಸ್ವಾಧೀಪಡಿಸಿಕೊಳ್ಳುವಿಕೆಯ ಕುರಿತಾಗಿ ಫೋನ್‌ ಪೇ ಕಂಪನಿಯೊಂದಿಗೆ ಝೆಸ್ಟ್‌ ಮನಿ ಮಾತುಕತೆ ಆರಂಭಿಸಿತ್ತು. 200 ಮಿಲಿಯನ್‌ ಡಾಲರ್‌ ನಿಂದ 300 ಮಿಲಿಯನ್‌ ಡಾಲರ್‌ ನಡುವಿನ ಮೌಲ್ಯದಲ್ಲಿ ಕಂಪನಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮಾತುಕತೆಗಳು ನಡೆದಿದ್ದವು. ಆದರೆ ಉಭಯ ಕಂಪನಿಗಳ ಷೇರುದಾರರು ನಡುವೆ ಭಿನ್ನಾಭಿಪ್ರಾಯ, ಹಣಕಾಸು ತಂತ್ರಜ್ಞಾನ ವಲಯದಲ್ಲಿನ ನಿಧಾನಗತಿ ಮುಂತಾದ ಕಾರಣಗಳಿಂದ ಈ ಮಾತುಕತೆಯನ್ನು 2023ರ ಮಾರ್ಚ್‌ ಅಂತ್ಯದಲ್ಲಿ ಫೋನ್‌ ಪೇ ಸ್ಥಗಿತಗೊಳಿಸಿತು.

ಈ ಕಾರಣದಿಂದಾಗಿ ಝೆಸ್ಟ್‌ ಮನಿ ಕಂಪನಿಯು ತನ್ನ ನಿರಂತರತೆ ಮತ್ತು ಪ್ರಸ್ತುತ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಬದುಕುಳಿಯಲು ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.
ZestMoney ಅನ್ನು 2015 ರಲ್ಲಿ ಲಿಜ್ಜೀ ಚಾಪ್ಮನ್, ಪ್ರಿಯಾ ಶರ್ಮಾ ಮತ್ತು ಆಶಿಶ್ ಅನಂತರಾಮನ್ ಅವರು ಸ್ಥಾಪಿಸಿದ್ದಾರೆ. ಈ ಹಿಂದೆ ಪೈನ್‌ ಲ್ಯಾಬ್ಸ್‌ ಮತ್ತು ಭಾರತ್‌ ಪೇ ಯೊಂದಿಗೂ ಕೂಡ ಝೆಸ್ಟ್‌ ಮನಿ ಸ್ವಾಧೀನ ಮಾತುಕತೆಯನ್ನು ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!