October 17, 2026
Saturday, October 17, 2026
spot_img

ಸಂಜೆಗೆ ಒಂದೊಳ್ಳೆ ರುಚಿಕರ ಸ್ನಾಕ್ಸ್‌ ಚೀಸ್‌ ಬ್ರೆಡ್‌ ಟೋಸ್ಟ್‌ ಟ್ರೈ ಮಾಡಿ, ಟೇಸ್ಟ್‌ ಸೂಪರ್‌

ಸಾಮಾಗ್ರಿಗಳು

ಬ್ರೆಡ್‌
ಚೀಸ್‌
ಈರುಳ್ಳಿ
ಕ್ಯಾಪ್ಸಿಕಂ
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್‌
ಬೆಣ್ಣೆ

ಮಾಡುವ ವಿಧಾನ

ಮೊದಲು ಈರುಳ್ಳಿ, ಕ್ಯಾಪ್ಸಿಕಂ ಕತ್ತರಿಸಿಕೊಳ್ಳಿ. ಇದಕ್ಕೆ ಉಪ್ಪು, ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್‌ ಹಾಕಿ ಮಿಕ್ಸ್‌ ಮಾಡಿ

ಆನಂತರ ಬ್ರೆಡ್‌ನ್ನು ಅರ್ಧ ಭಾಗಕ್ಕೆ ಕತ್ತರಿಸಿಕೊಳ್ಳಿ. ಅದರ ಮೇಲೆ ಬೆಣ್ಣೆ ಹಚ್ಚಿ. ಈ ಮಿಶ್ರಣವನ್ನು ಇಡಿ, ಮೇಲೆ ಚೀಸ್‌ ಹಾಕಿ

ಈ ರೀತಿ ನಿಮಗೆಷ್ಟು ಬ್ರೆಡ್‌ ಬೇಕೋ ಅಷ್ಟನ್ನು ತಯಾರಿಸಿಕೊಳ್ಳಿ. ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ, ಬೆಣ್ಣೆ ಹಾಕಿ, ಈ ಬ್ರೆಡ್‌ ತುಂಡುಗಳನ್ನು ಹಾಕಿ ರೋಸ್ಟ್‌ ಮಾಡಿ.

ರೋಸ್ಟ್‌ ಮಾಡುವಾಗ ತವಾ ಕವರ್‌ ಮಾಡಿ. ಆಗ ಚೀಸ್‌ ಚೆನ್ನಾಗಿ ಬೆಂದು ಅದ್ಭುತ ರುಚಿ ನೀಡುತ್ತದೆ. ಕೆಚಪ್‌ ಜೊತೆಗೆ ಚೀಸ್‌ ಬ್ರೆಡ್‌ ಟೋಸ್ಟ್‌ ತಿಂದುಬಿಡಿ.

Must Read