ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೇಡಿ ಸೂಪರ್ಸ್ಟಾರ್ ನಯನತಾರಾ ಮತ್ತೆ ದೇವತೆಯ ಅವತಾರದಲ್ಲಿ ಬೆಳ್ಳಿಪರದೆಗೆ ಮರಳಿದ್ದು, ಅವರ ಬಹುನಿರೀಕ್ಷಿತ ‘ಮೂಕುತಿ ಅಮ್ಮನ್ 2’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪೌರಾಣಿಕ ಹಿನ್ನೆಲೆಯನ್ನು ಇಂದಿನ ಆಧುನಿಕ ಕಾಲಘಟ್ಟಕ್ಕೆ ಲಿಂಕ್ ಮಾಡಿ ಸಿದ್ಧಪಡಿಸಲಾಗಿರುವ ಈ ಚಿತ್ರದ ಟ್ರೈಲರ್ ಭಾರಿ ಕುತೂಹಲ ಮೂಡಿಸಿದೆ. ಈ ದೀಪಾವಳಿ ಹಬ್ಬದ ಸಂಭ್ರಮದಲ್ಲಿ, ಅಂದರೆ ನವೆಂಬರ್ 6ರಂದು ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಲಿದೆ.
ದ್ವಿಪಾತ್ರದಲ್ಲಿ ನಯನತಾರಾ ಜಾದೂ?
ಟ್ರೈಲರ್ನಲ್ಲಿ ನಯನತಾರಾ ಅವರು ಎರಡು ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ದೇವತೆ ‘ಮಹಾಶಕ್ತಿ’ಯಾಗಿ ದೈವಿಕ ಕಳೆಯಲ್ಲಿ ಮಿನುಗಿದರೆ, ಮತ್ತೊಂದು ಕಡೆ ಆಧುನಿಕ ಕಾಲದ ಸಾಮಾನ್ಯ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಬೇರೆ ಬೇರೆ ವ್ಯಕ್ತಿತ್ವ ಹೊಂದಿರುವ ಈ ಇಬ್ಬರ ಕಥೆ ಹೇಗೆ ಒಂದಾಗುತ್ತದೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿದೆ.
ವಿಲನ್ ಆಗಿ ರೆಜಿನಾ ಅಬ್ಬರ
ಈ ಬಾರಿ ದೇವತೆಗೆ ಟಕ್ಕರ್ ಕೊಡಲು ನಟಿ ರೆಜಿನಾ ಕ್ಯಾಸಂಡ್ರಾ ಖಳನಾಯಕಿಯಾಗಿ ಅಖಾಡಕ್ಕಿಳಿದಿದ್ದಾರೆ. ಇಡೀ ಕಥೆಯ ಸಂಘರ್ಷಕ್ಕೆ ಇವರ ಪಾತ್ರವೇ ಕೇಂದ್ರಬಿಂದುವಾಗಿರುವಂತೆ ಟ್ರೈಲರ್ನಲ್ಲಿ ಬಿಂಬಿಸಲಾಗಿದೆ.
ಕಥೆಯ ಒಳನೋಟ
ಟ್ರೈಲರ್ ಆರಂಭದಲ್ಲಿ ಭೂತಕಾಲದ ಎರಡು ಶಕ್ತಿಗಳ ನಡುವಿನ ಮಹಾಯುದ್ಧದ ಝಲಕ್ ತೋರಿಸಲಾಗುತ್ತದೆ. ನಂತರ ಕಥೆ ಪ್ರಸ್ತುತ ಕಾಲಕ್ಕೆ ಶಿಫ್ಟ್ ಆಗುತ್ತದೆ. ಅನಿರೀಕ್ಷಿತವಾಗಿ ದೈವಿಕ ಶಕ್ತಿಗಳ ಹೋರಾಟದ ಮಧ್ಯೆ ಸಿಲುಕಿಕೊಳ್ಳುವ ಒಬ್ಬ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸುತ್ತ ಇಡೀ ಕಥೆ ಮಾಡಿದಂತೆ ಕಾಣುತ್ತದೆ.
ಕೊನೆಯಲ್ಲೊಂದು ಬಿಗ್ ಟ್ವಿಸ್ಟ್
ಟ್ರೈಲರ್ನ ಕೊನೆಯಲ್ಲಿ ಇನ್ನೂ ಮೂವರು ದೇವತೆಗಳು ಭೂಮಿಗೆ ಆಗಮಿಸುವ ಸುಳಿವು ನೀಡಲಾಗಿದ್ದು, ಆ ದೇವತೆಗಳು ಯಾರು ಮತ್ತು ಅವರ ಪಾತ್ರವೇನು ಎಂಬ ಕುತೂಹಲ ಫ್ಯಾನ್ಸ್ನಲ್ಲಿ ಹೆಚ್ಚಾಗಿದೆ.
ನಟ ‘ದುನಿಯಾ ವಿಜಯ್’ ಎಂಟ್ರಿ
ಈ ಚಿತ್ರದಲ್ಲಿ ನಯನತಾರಾ ಮತ್ತು ರೆಜಿನಾ ಜೊತೆಗೆ ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಉಳಿದಂತೆ ಊರ್ವಶಿ, ಯೋಗಿ ಬಾಬು, ಅಭಿನಯಾ ಹಾಗೂ ಶ್ರುತಿ ಎಸ್ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ:
ಮೊದಲ ಭಾಗದ ಯಶಸ್ಸು
2020ರಲ್ಲಿ ಬಿಡುಗಡೆಯಾಗಿದ್ದ ‘ಮೂಕುತಿ ಅಮ್ಮನ್’ ಚಿತ್ರಕ್ಕೆ ಇದು ಸೀಕ್ವೆಲ್ ಆಗಿದೆ. ಆರ್.ಜೆ. ಬಾಲಾಜಿ ಮತ್ತು ಎನ್.ಜೆ. ಶರವಣನ್ ನಿರ್ದೇಶಿಸಿದ್ದ ಮೊದಲ ಭಾಗವು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿ ಭಾರೀ ಜನಪ್ರಿಯತೆ ಗಳಿಸಿತ್ತು. ಸದ್ಯ ಮೊದಲ ಭಾಗವು ‘ಜಿಯೋಹಾಟ್ಸ್ಟಾರ್’ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.



