October 24, 2026
Saturday, October 24, 2026
spot_img

FOOD | ರುಚಿ, ಆರೋಗ್ಯದ ಸೂಪರ್ ಕಾಂಬಿನೇಷನ್.. ನಿಮಿಷಗಳಲ್ಲಿ ತಯಾರಿಸಿ ‘ಸೋಯಾ ಪಲಾವ್’

ಬೇಕಾಗುವ ಸಾಮಗ್ರಿಗಳು

ಬಾಸುಮತಿ ಅಕ್ಕಿ

ಸೋಯಾ ಚಂಕ್ಸ್

ಈರುಳ್ಳಿ, ಟೊಮೆಟೊ, ಕ್ಯಾರೆಟ್, ಬಟಾಣಿ, ಆಲೂಗಡ್ಡೆ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಹಸಿಮೆಣಸಿನಕಾಯಿ

ಏಲಕ್ಕಿ

ಲವಂಗ

ಚಕ್ಕೆ

ಪಲಾವ್ ಎಲೆ

ಖಾರದ ಪುಡಿ

ಗರಂ ಮಸಾಲೆ

ಉಪ್ಪು

ಎಣ್ಣೆ

ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಮೊದಲು ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಚಕ್ಕೆ, ಲವಂಗ, ಏಲಕ್ಕಿ ಮತ್ತು ಪಲಾವ್ ಎಲೆ ಹಾಕಿ ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಈಗ ಟೊಮೆಟೊ, ಕ್ಯಾರೆಟ್, ಬಟಾಣಿ ಮತ್ತು ಆಲೂಗಡ್ಡೆ ಸೇರಿಸಿ ಸ್ವಲ್ಪ ಸಮಯ ಬೇಯಿಸಿ. ಬಳಿಕ ಬಿಸಿ ನೀರಿನಲ್ಲಿ ನೆನೆಸಿ ನೀರು ಹಿಂಡಿದ ಸೋಯಾ ಚಂಕ್ಸ್, ಗರಂ ಮಸಾಲೆ, ಖಾರದ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ನೆನೆಸಿದ ಅಕ್ಕಿ ಹಾಗೂ ನೀರು ಸೇರಿಸಿ, ಕುಕ್ಕರ್ ಮುಚ್ಚಳ ಮುಚ್ಚಿ ೨ ವಿಸಿಲ್ ಕೂಗಿಸಿದರೆ, ರುಚಿಯಾದ ಸೋಯಾ ಪಲಾವ್ ಸವಿಯಲು ಸಿದ್ಧ!

Must Read

Skip to toolbar