October 29, 2026
Thursday, October 29, 2026
spot_img

ಸಿಹಿ ಬೇಕು, ಆದರೆ ಕ್ಯಾಲೋರಿ ಬೇಡವೇ? ಮಧುಮೇಹಿಗಳಿಗೆ ವರದಾನ ಈ ನೈಸರ್ಗಿಕ ಆಯ್ಕೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್;

ದಿನದ ಚಹಾ ಅಥವಾ ಕಾಫಿ ಸಿಹಿಯಾಗಿರಬೇಕು, ಆದರೆ ಸಕ್ಕರೆ ತೂಕ ಹೆಚ್ಚಿಸುತ್ತದೆ ಮತ್ತು ಮಧುಮೇಹವನ್ನು ಏರಿಸುತ್ತದೆ ಎಂಬ ಭಯವೇ? ಇಂದಿನ ದಿನಗಳಲ್ಲಿ ಸಕ್ಕರೆಗೆ ಬದಲಾಗಿ ಮಾರುಕಟ್ಟೆಯಲ್ಲಿ ಅನೇಕ ಪರ್ಯಾಯ ಸಿಹಿಕಾರಕಗಳು ಲಭ್ಯವಿವೆ. ಆದರೆ, ಇವುಗಳಲ್ಲಿ ಆರೋಗ್ಯಕ್ಕೆ ಯಾವುದು ಸುರಕ್ಷಿತ ಮತ್ತು ಪ್ರಯೋಜನಕಾರಿ ಎಂಬುದನ್ನು ತಿಳಿಯುವುದು ಅತ್ಯಗತ್ಯ.

ಸ್ಟೀವಿಯಾ

ಸಕ್ಕರೆ ಕಾಯಿಲೆ ಇರುವವರಿಗೂ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಸ್ಟೀವಿಯಾ ಗಿಡದ ಎಲೆಗಳಿಂದ ತಯಾರಿಸುವ ಸಿಹಿಕಾರಕವು ನಂಬರ್ ಒನ್ ಆಯ್ಕೆಯಾಗಿದೆ. ಇದು ಸಂಪೂರ್ಣ ನೈಸರ್ಗಿಕವಾಗಿದ್ದು, ಇದರಲ್ಲಿ ಶೂನ್ಯ ಕ್ಯಾಲೋರಿ ಇರುತ್ತದೆ. ಅಲ್ಲದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸುವುದಿಲ್ಲ.

ಸುಕ್ರಲೋಸ್ ಮತ್ತು ಆಸ್ಪರ್ಟೇಮ್

ಸುಕ್ರಲೋಸ್ ಮತ್ತು ಆಸ್ಪರ್ಟೇಮ್ ನಂತಹ ಕೃತಕ ಸಿಹಿಕಾರಕಗಳು ಸಹ ಕ್ಯಾಲೋರಿ ರಹಿತವಾಗಿವೆ. ಆದರೆ ಇವುಗಳನ್ನು ರಾಸಾಯನಿಕಗಳ ಮೂಲಕ ತಯಾರಿಸಲಾಗುತ್ತದೆ. ಸಕ್ಕರೆ ಬಳಕೆಯನ್ನು ತಕ್ಷಣವೇ ನಿಲ್ಲಿಸಲು ಇವು ತಾತ್ಕಾಲಿಕವಾಗಿ ಸಹಾಯ ಮಾಡುತ್ತವೆಯಾದರೂ, ಅತಿಯಾದ ಬಳಕೆಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು.

ಮಾಂಕ್ ಫ್ರೂಟ್

ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯತೆ ಗಳಿಸುತ್ತಿರುವ ಮತ್ತೊಂದು ನೈಸರ್ಗಿಕ ಸಿಹಿಕಾರಕವೆಂದರೆ ಮಾಂಕ್ ಫ್ರೂಟ್. ಇದು ಹಣ್ಣಿನಿಂದ ಎಸ್ಟ್ರಾಕ್ಟ್ ಮಾಡಲಾದ ಸಿಹಿಯಾಗಿದ್ದು, ಸಕ್ಕರೆಗಿಂತ ನೂರು ಪಟ್ಟು ಹೆಚ್ಚು ಸಿಹಿಯಿರುತ್ತದೆ. ಇದಕ್ಕೆ ಯಾವುದೇ ಕಹಿ ರುಚಿ ಇರುವುದಿಲ್ಲ. ಮಧುಮೇಹಿಗಳು ಯಾವುದೇ ಆತಂಕವಿಲ್ಲದೆ ಇದನ್ನು ತಮ್ಮ ನಿತ್ಯದ ಆಹಾರದಲ್ಲಿ ಬಳಸಬಹುದು.

ಮಾರುಕಟ್ಟೆಯಲ್ಲಿ ಸಿಗುವ ಕೆಲವು ‘ಶುಗರ್ ಫ್ರೀ’ ಉತ್ಪನ್ನಗಳಲ್ಲಿ ಕಾರ್ಬೋಹೈಡ್ರೇಟ್ಸ್ ಇರಬಹುದು. ಆದ್ದರಿಂದ ಪ್ಯಾಕೆಟ್ ಮೇಲಿನ ವಿವರಗಳನ್ನು ಓದುವುದು ಮುಖ್ಯ. ಅಂತಿಮವಾಗಿ, ಸ್ಟೀವಿಯಾ ಅಥವಾ ಅತಿಯಾದ ಸಂಸ್ಕರಣೆಗೆ ಒಳಗಾಗದ ನೈಸರ್ಗಿಕ ಪದಾರ್ಥಗಳು ಆರೋಗ್ಯಕ್ಕೆ ಹೆಚ್ಚು ಸುರಕ್ಷಿತ. ನಿಮ್ಮ ವೈಯಕ್ತಿಕ ಆರೋಗ್ಯ ಸ್ಥಿತಿಗೆ ತಕ್ಕಂತೆ ಯಾವುದು ಸೂಕ್ತ ಎಂಬುದನ್ನು ತಿಳಿಯಲು ವೈದ್ಯರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆಯುವುದು ಯಾವಾಗಲೂ ಒಳ್ಳೆಯದು.

Must Read

Skip to toolbar