October 30, 2026
Friday, October 30, 2026
spot_img

ಫಿಟ್ & ಫುಡ್ 30 | ಫಿಟ್‌ನೆಸ್ ಪ್ರಿಯರ ಫೇವರೆಟ್ ಚಾಯ್ಸ್.. ಟ್ರೈ ಮಾಡಿ ಸೂಪರ್ ಹೆಲ್ದಿ ಆವಕಾಡೊ ಎಗ್ ರೋಲ್

ಏನೇನ್ ಬೇಕು?

ಚಪಾತಿ

ಮೊಟ್ಟೆ

ಆವಕಾಡೊ

ಈರುಳ್ಳಿ, ಕ್ಯಾಪ್ಸಿಕಮ್

ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು

ನಿಂಬೆ ರಸ, ಉಪ್ಪು, ಕಾಳುಮೆಣಸಿನ ಪುಡಿ

ಮಾಡೋದು ಹೇಗೆ ನೋಡಿಕೊಳ್ಳಿ

ಮೊದಲು ಒಂದು ಬೌಲ್‌ನಲ್ಲಿ ಆವಕಾಡೊ ಹಣ್ಣಿನ ತಿರುಳನ್ನು ಚೆನ್ನಾಗಿ ಸ್ಮಾಶ್ ಮಾಡಿ. ಅದಕ್ಕೆ ಸ್ವಲ್ಪ ಉಪ್ಪು, ಕಾಳುಮೆಣಸಿನ ಪುಡಿ ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಮತ್ತೊಂದು ಬೌಲ್‌ನಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿ, ಅದಕ್ಕೆ ಈರುಳ್ಳಿ, ಹಸಿಮೆಣಸು ಮತ್ತು ಉಪ್ಪು ಸೇರಿಸಿ ಆಮ್ಲೆಟ್ ತಯಾರಿಸಿಕೊಳ್ಳಿ. ಈಗ ಬಿಸಿ ಮಾಡಿದ ಚಪಾತಿ ಮೇಲೆ ಮೊದಲು ಸಿದ್ಧಪಡಿಸಿಟ್ಟುಕೊಂಡ ಆವಕಾಡೊ ಪೇಸ್ಟ್ ಅನ್ನು ಚೆನ್ನಾಗಿ ಹರಡಿ. ಇದರ ಮೇಲೆ ತಯಾರಿಸಿದ ಮೊಟ್ಟೆಯ ಆಮ್ಲೆಟ್ ಅನ್ನು ಇರಿಸಿ. ಕೊನೆಯಾಗಿ ಇದಕ್ಕೆ ಸ್ವಲ್ಪ ಚಾಟ್ ಮಸಾಲಾ ಹಾಕಿ ರೋಲ್ ಮಾಡಿದರೆ, ಬಾಯಲ್ಲಿ ನೀರೂರಿಸುವ ರುಚಿಕರವಾದ ಆವಕಾಡೊ ಎಗ್ ರೋಲ್ ಸವಿಯಲು ಸಿದ್ಧ!

ಇದನ್ನ ತಿಂದ್ರೆ ಏನ್ ಲಾಭ?

ಆವಕಾಡೊದಲ್ಲಿರುವ ಉತ್ತಮ ಕೊಬ್ಬುಗಳು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಇದರಲ್ಲಿ ನಾರಿನಾಂಶ ಅಧಿಕವಿರುವುದರಿಂದ, ಇದು ಬೇಗನೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

ಮೊಟ್ಟೆಯಲ್ಲಿ ಸಿಗುವ ಸಮೃದ್ಧ ಪ್ರೊಟೀನ್ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.

ವಿಟಮಿನ್ ‘ಇ’ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿರುವ ಆವಕಾಡೊ ಚರ್ಮದ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಪ್ರಯೋಜನಕಾರಿ.

Must Read

Skip to toolbar