ಬೇಕಾಗುವ ಸಾಮಗ್ರಿಗಳು
ಪನೀರ್
ಈರುಳ್ಳಿ
ಟೊಮೆಟೊ
ಹಸಿಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಅರಿಶಿಣ ಪುಡಿ
ಖಾರದ ಪುಡಿ
ಗರಂ ಮಸಾಲ
ಎಣ್ಣೆ
ಕೊತ್ತಂಬರಿ ಸೊಪ್ಪು
ಉಪ್ಪು
ಮಾಡುವ ವಿಧಾನ
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಗೋಲ್ಡನ್ ಬ್ರೌನ್ ಬರುವವರೆಗೆ ಬಾಡಿಸಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಬಾಡಿಸಿ. ಇದಕ್ಕೆ ಅರಿಶಿಣ, ಖಾರದ ಪುಡಿ, ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಪುಡಿಮಾಡಿಟ್ಟುಕೊಂಡ ಪನೀರ್ ಅನ್ನು ಬಾಣಲೆಗೆ ಹಾಕಿ. ಮಸಾಲೆ ಎಲ್ಲ ಪನೀರ್ಗೆ ಚೆನ್ನಾಗಿ ಹಿಡಿಯುವಂತೆ 2 ರಿಂದ 3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕೈಯಾಡಿಸಿ. ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ ಗ್ಯಾಸ್ ಆಫ್ ಮಾಡಿ. ಬಿಸಿಬಿಸಿಯಾದ ಚಪಾತಿ, ರೋಟಿ ಅಥವಾ ಬ್ರೆಡ್ ಜೊತೆ ಸವಿಯಲು ಸೂಪರ್ ರುಚಿಕರವಾದ ಪನೀರ್ ಬುರ್ಜಿ ಸಿದ್ಧ!



