ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಭಿನ್ನ ಕಥೆ ತೆರೆಯ ಮೇಲೆ ಬರೋದಕ್ಕೆ ತಯಾರಾಗಿದೆ. ನಟ ಶೈನ್ ಶೆಟ್ಟಿ ಅಭಿನಯದ ಶಂಕರಾಭರಣ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.
ರಂಗಸ್ಥಳ ಸ್ಟುಡಿಯೋಸ್ ಲಾಂಛನದಲ್ಲಿ ಸಿನಿಮಾ ಮೂಡಿಬಂದಿದ್ದು, ಟ್ರೇಲರ್ ನೋಡಿ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ರಹಸ್ಯವಾದ ರಸ್ತೆಯಲ್ಲಿ ಹೋಗುವ ಬಸ್ಸಿನ ಕಂಡಕ್ಟರ್ ಪಾತ್ರವನ್ನು ಶೈನ್ ಮಾಡುತ್ತಿದ್ದು, ಹಳ್ಳಿ ಕಥೆಗಳು, ದೆವ್ವದ ಕಾಟ, ನಿಗೂಢ ಘಟನೆಗಳ ಜೊತೆ ಹಾಸ್ಯ ಮಿಶ್ರಣವಾಗಿದೆ.
ಮಿಸ್ಟರಿ ಸೇತುವೆ ಇಲ್ಲಿ ಗಮನ ಸೆಳೆದಿದೆ. ಸಾಕಷ್ಟು ಫನ್ ಇದೆ ಎಂಬುದರ ಝಲಕ್ ಟ್ರೇಲರ್ನಲ್ಲಿ ಸಿಕ್ಕಿದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಹಾಗೂ ಉದಿತ್ ಖುರಾನಾ ಅವರ ಕ್ಯಾಮೆರಾ ಕೈಚಳಕ ಚಿತ್ರದ ಮಿಸ್ಟರಿ ಮೂಡನ್ನು ಅತ್ಯಂತ ಪರಿಣಾಮಕಾರಿಯಾಗಿ ತಂದಿದೆ. ಮೊದಲ ಬಾರಿಗೆ ಶೈನ್ ಶೆಟ್ಟಿ ನಿರ್ಮಾಪಕನಾಗಿ ಎಂಟ್ರಿ ಕೊಟ್ಟಿದ್ದಾರೆ. ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಡೈರೆಕ್ಟರ್ ಸುಮಂತ್ ಭಟ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಶೈನ್ ಶೆಟ್ಟಿ, ತನ್ವಿ ರಾಮ್, ಸಂಪತ್ ಕುಮಾರ್, ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ತಿಂಗಳ 20ನೇ ತಾರೀಖಿನಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಈ ಸಿನಿಮಾ ಸು ಫ್ರಮ್ ಸೋ ರೀತಿ ಎಲ್ಲ ಆಡಿಯನ್ಸ್ಗಳನ್ನು ಮುಟ್ಟಲಿದ್ಯಾ? ಕಾದುನೋಡಬೇಕಿದೆ.



