November 12, 2026
Thursday, November 12, 2026
spot_img

ಫಿಟ್ & ಫುಡ್ 11 | ಮೊಟ್ಟೆ, ಬ್ರೆಡ್ ಇದ್ದರೆ ಸಾಕು.. ನಿಮಿಷಗಳಲ್ಲೇ ಸಿದ್ಧವಾಗುತ್ತೆ ರುಚಿಕರ ಎಗ್ ಟೋಸ್ಟ್

ಏನೇನ್ ಬೇಕು?

ಮೊಟ್ಟೆಗಳು

ಬ್ರೆಡ್

ಈರುಳ್ಳಿ

ಹಸಿಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

ಅರಿಶಿಣ

ಮೆಣಸಿನ ಪುಡಿ

ಉಪ್ಪು

ಕಾಳುಮೆಣಸಿನ ಪುಡಿ

ಎಣ್ಣೆ

ಮಾಡೋದು ಹೇಗೆ ನೋಡಿಕೊಳ್ಳಿ

ಒಂದು ಪಾತ್ರೆಯಲ್ಲಿ ಎರಡು ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ನಂತರ ಉಪ್ಪು, ಅರಿಶಿಣ ಮತ್ತು ಮೆಣಸಿನ ಪುಡಿ ಹಾಕಿ ಎಲ್ಲವನ್ನೂ ಚೆನ್ನಾಗಿ ಬೆರೆಸಿ. ಬೇಕಿದ್ದರೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನೂ ಸೇರಿಸಬಹುದು. ಈಗ ಒಂದು ಹಂಚನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ. ಬ್ರೆಡ್ ತುಂಡುಗಳನ್ನು ಸಿದ್ಧಪಡಿಸಿದ ಮೊಟ್ಟೆಯ ಮಿಶ್ರಣದಲ್ಲಿ ಎರಡೂ ಬದಿಗೆ ಚೆನ್ನಾಗಿ ಅದ್ದಿ. ನಂತರ ಬಿಸಿಯಾದ ಹಂಚಿನ ಮೇಲೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಮೊಟ್ಟೆಯ ಮಿಶ್ರಣ ಬ್ರೆಡ್‌ಗೆ ಚೆನ್ನಾಗಿ ಅಂಟಿಕೊಳ್ಳುವಂತೆ ನೋಡಿಕೊಳ್ಳಿ. ಬ್ರೆಡ್‌ನ ಒಂದು ಬದಿ ಚೆನ್ನಾಗಿ ಬೆಂದ ಬಳಿಕ ನಿಧಾನವಾಗಿ ತಿರುಗಿಸಿ ಮತ್ತೊಂದು ಬದಿಯನ್ನೂ ಬೇಯಿಸಿ. ಎರಡೂ ಬದಿಗಳು ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಬೇಯಿಸಿದರೆ ರುಚಿಕರವಾದ ಎಗ್ ಟೋಸ್ಟ್ ಸಿದ್ಧ.

ಇದನ್ನ ತಿಂದ್ರೆ ಏನ್ ಲಾಭ?

ಮೊಟ್ಟೆಯಲ್ಲಿ ದೇಹಕ್ಕೆ ಅಗತ್ಯವಾದ ಪ್ರೋಟೀನ್ ದೊರೆಯುತ್ತದೆ.

ಬ್ರೆಡ್‌ನಿಂದ ಶಕ್ತಿ ನೀಡುವ ಕಾರ್ಬೋಹೈಡ್ರೇಟ್‌ಗಳು ಸಿಗುತ್ತವೆ.

ಈರುಳ್ಳಿ, ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸುವುದರಿಂದ ರುಚಿಯೂ ಹೆಚ್ಚುತ್ತದೆ.

ಬೆಳಗಿನ ಉಪಾಹಾರಕ್ಕೆ ಮಾತ್ರವಲ್ಲದೆ ಸಂಜೆ ಹಸಿವಾದಾಗಲೂ ಎಗ್ ಟೋಸ್ಟ್ ಮಾಡಿಕೊಳ್ಳಬಹುದು.

Must Read

Skip to toolbar