ಬೇಕಾಗುವ ಸಾಮಗ್ರಿಗಳು
ಸ್ವೀಟ್ ಕಾರ್ನ್
ಈರುಳ್ಳಿ
ಟೊಮೆಟೊ
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ನಿಂಬೆ ರಸ
ಖಾರದ ಪುಡಿ
ಜೀರಿಗೆ ಪುಡಿ
ಚಾಟ್ ಮಸಾಲಾ
ಉಪ್ಪು
ಬೆಣ್ಣೆ
ಮಾಡುವ ವಿಧಾನ
ಒಂದು ಬಾಣಲೆಯಲ್ಲಿ 1 ಟೀ ಸ್ಪೂನ್ ಬೆಣ್ಣೆ ಬಿಸಿ ಮಾಡಿ, ಸ್ವೀಟ್ ಕಾರ್ನ್ ಗಳನ್ನು ಹಾಕಿ 3–4 ನಿಮಿಷ ಹುರಿಯಿರಿ. ಕಾರ್ನ್ ಸ್ವಲ್ಪ ಕೆಂಪಗಾದಾಗ ಗ್ಯಾಸ್ ಆಫ್ ಮಾಡಿ. ದೊಡ್ಡ ಬಟ್ಟಲಿನಲ್ಲಿ ಹುರಿದ ಕಾರ್ನ್, ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ. ಇದಕ್ಕೆ ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲಾ, ಉಪ್ಪು ಮತ್ತು ನಿಂಬೆ ರಸ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಕಲಸಿ, ತಕ್ಷಣವೇ ಬಡಿಸಿ. ಬೇಕಿದ್ದರೆ ಮೇಲೆ ಸ್ವಲ್ಪ ಸೇವ್ ಅಥವಾ ಹುರಿದ ಕಡಲೆಬೀಜ ಉದುರಿಸಿ ಸವಿಯಬಹುದು.



