November 23, 2026
Monday, November 23, 2026
spot_img

ಫಿಟ್ & ಫುಡ್ 22 | ಬೆಳಗಿನ ತಿಂಡಿಗೆ ರುಚಿ ಜೊತೆಗೆ ಆರೋಗ್ಯಕ್ಕೂ ಉತ್ತಮ ಆಯ್ಕೆ ಈ ಗರಿಗರಿಯಾದ ಕ್ಯಾರೆಟ್ ದೋಸೆ

ಏನೇನ್ ಬೇಕು?

ದೋಸೆ ಹಿಟ್ಟು

ಕ್ಯಾರೆಟ್

ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು

ಜೀರಿಗೆ

ಉಪ್ಪು

ಎಣ್ಣೆ

ಮಾಡೋದು ಹೇಗೆ ನೋಡಿಕೊಳ್ಳಿ

ದೋಸೆ ಹಿಟ್ಟಿಗೆ ತುರಿದ ಕ್ಯಾರೆಟ್, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಜೀರಿಗೆ ಮತ್ತು ಅಗತ್ಯವಿದ್ದಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ತುಂಬಾ ದಪ್ಪವಿದ್ದರೆ ಸ್ವಲ್ಪ ನೀರು ಸೇರಿಸಿ. ನಾನ್-ಸ್ಟಿಕ್ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಸ್ವಲ್ಪ ಎಣ್ಣೆ ಸವರಿ. ಒಂದು ಸೌಟು ಹಿಟ್ಟನ್ನು ಕಾವಲಿಯ ಮಧ್ಯದಲ್ಲಿ ಹಾಕಿ ವೃತ್ತಾಕಾರದಲ್ಲಿ ತೆಳುವಾಗಿ ಹರಡಿ. ಅಂಚುಗಳಿಗೆ ಸ್ವಲ್ಪ ಎಣ್ಣೆ ಹಾಕಿ. ದೋಸೆ ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾದ ಮೇಲೆ ಮಡಚಿ ತೆಗೆಯಿರಿ. ಬಿಸಿಬಿಸಿಯಾಗಿ ಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ.

ಇದನ್ನ ತಿಂದ್ರೆ ಏನ್ ಲಾಭ?

ಕ್ಯಾರೆಟ್‌ನಲ್ಲಿರುವ ಬೀಟಾ-ಕೆರೋಟಿನ್ ವಿಟಮಿನ್ ಎ ಆಗಿ ಬದಲಾಗಿ ಕಣ್ಣಿನ ಆರೋಗ್ಯ ಕಾಪಾಡುತ್ತದೆ.

ಕ್ಯಾರೆಟ್ ಮತ್ತು ದೋಸೆಯ ನಾರಿನಂಶ ಹೊಟ್ಟೆಯನ್ನು ಹಗುರವಾಗಿರಿಸಿ ಜೀರ್ಣಕ್ರಿಯೆಗೆ ನೆರವಾಗುತ್ತದೆ.

ಅಕ್ಕಿ ಮತ್ತು ಕ್ಯಾರೆಟ್‌ನ ನೈಸರ್ಗಿಕ ಸಿಹಿ ಬೆಳಗಿನ ಹೊತ್ತಿಗೆ ಚಟುವಟಿಕೆಯ ಶಕ್ತಿ ನೀಡುತ್ತದೆ.

ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಚರ್ಮದ ಕಾಂತಿ ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತವೆ.

Must Read

Skip to toolbar