November 24, 2026
Tuesday, November 24, 2026
spot_img

ದಿನಭವಿಷ್ಯ: ಆತ್ಮಾಭಿಮಾನ ಕಾಪಾಡಿಕೊಳ್ಳಿ, ಅನಗತ್ಯ ಖರ್ಚು ಕಡಿಮೆ ಮಾಡಿದರೆ ಉತ್ತಮ

ಮೇಷ.
ಎಲ್ಲ ದಿಕ್ಕಿನಿಂದ ನಿಮ್ಮನ್ನು ತಳ್ಳಲು ಯತ್ನಿಸುವರು. ನಿಮ್ಮ ನಿರ್ಧಾರ ಸಡಿಲಿಸದಿರಿ. ಆದಾಯ ಹೆಚ್ಚಿಸುವ ಯೋಜನೆ ಫಲಿಸದು.
ವೃಷಭ
ಕುಟುಂಬ ಸದಸ್ಯರ ಕುರಿತು ಚಿಂತೆ ಹೆಚ್ಚಿಸುವ ಬೆಳವಣಿಗೆ ಸಂಭವ. ಪ್ರಯಾಣ ಯೋಜನೆ ಯಲ್ಲಿ ಗೊಂದಲ ಸೃಷ್ಟಿ. ಆತ್ಮೀಯರ ಸಾಂತ್ವನ.
ಮಿಥುನ
ಇತರರು ನಿಮ್ಮ ಮೇಲೆ ಅಽಕಾರ ಚಲಾಯಿಸಲು ಅವಕಾಶ ನೀಡದಿರಿ. ಆತ್ಮಾಭಿಮಾನ ಕಳಕೊಳ್ಳಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಣೆ.
ಕಟಕ
ಆರ್ಥಿಕ ಸಮಸ್ಯೆ. ಅನವಶ್ಯ ವೆಚ್ಚ ತಗ್ಗಿಸಿ. ಕೇಳಿದ್ದೆಲ್ಲ ನಂಬಬೇಡಿ. ನಯವಂಚಕರ ಬಗ್ಗೆ ಎಚ್ಚರ ಇರಲಿ. ಆಪ್ತರ ಜತೆ ಬಿಗುಮಾನ ಬಿಡಿ.
ಸಿಂಹ
ವೃತ್ತಿಯಲ್ಲಿ ಒತ್ತಡ. ಸಮಾಧಾನದಿಂದ ವ್ಯವಹರಿಸಿ. ದುಡುಕು ಬೇಡ. ಒಳಿತು ಕೆಡುಕು ವಿಶ್ಲೇಷಿಸಿ ಕಾರ್ಯಾಚರಿಸಿ. ಕೌಟುಂಬಿಕ ಕಲಹ.
ಕನ್ಯಾ
ವೃತ್ತಿಯಲ್ಲಿ ಏಕಾಗ್ರತೆ ಮೂಡದು. ಮನೆಯವರ ಬಗ್ಗೆ ಅತಿಯಾಗಿ ಚಿಂತಿಸುವಿರಿ. ಏನೋ ಅಸಮಾಧಾನ. ವ್ಯಾಜ್ಯದಿಂದ ದೂರವಿರಿ.
ತುಲಾ
ನಿಮ್ಮದೇ ಸಮಸ್ಯೆಯ ಕಾರಣದಿಂದ ವಿವೇಕ ನಶಿಸಬಹುದು. ಆತುರದ ನಿರ್ಧಾರ ತಾಳದಿರಿ. ಸಹೋದ್ಯೋಗಿ ನೆರವಿಗೆ ಬರುವನು.
ವೃಶ್ಚಿಕ
ಕೋಲಾಹಲದ ದಿನ. ಅಶಾಂತಿ, ಉದ್ವಿಗ್ನತೆ ಎದುರಿಸುವಿರಿ. ಕೆಲಸದಲ್ಲಿ ಏಕಾಗ್ರತೆ ಮೂಡದು. ಆಹಾರದಿಂದ ಅಲರ್ಜಿ ಉಂಟಾದೀತು.
ಧನು
ಅತಿಯಾದ ಕೆಲಸ ಒತ್ತಡ ತಂದೀತು. ವಿರಾಮ ಪಡೆದು ವ್ಯವಹರಿಸುವುದು ಒಳಿತು. ಒಳ್ಳೆ ಅವಕಾಶ ಬಂದರೆ ಕೈಚೆಲ್ಲಬೇಡಿ. ಆರ್ಥಿಕ ಉನ್ನತಿ.
ಮಕರ
ಹಣದ ವಿಚಾರದಲ್ಲಿ ಇತರರನ್ನು ಅನುಕರಿಸದಿರಿ. ಪೈಪೋಟಿ ನಿಮಗೆ ಹಾನಿ ತಂದೀತು. ಯಾರದೋ ಟೀಕೆ ಮನಸ್ಸಿಗೆ ಘಾಸಿ ಮಾಡಲಿದೆ.
ಕುಂಭ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಸಮತೋಲನ ಸಾಽಸಿ. ಯಾವುದನ್ನೂ ಕಡೆಗಣಿಸದಿರಿ. ಆರ್ಥಿಕ ಬಿಕ್ಕಟ್ಟು ಕಾಡಬಹುದು.
ಮೀನ
ಏರಿಳಿತ ಕಾಣುವಿರಿ. ಕೆಲಸದಲ್ಲಿ ನಿಧಾನಗತಿ. ಸಂಪರ್ಕ ಕೊರತೆಯಿಂದ ಆಪ್ತರ ಜತೆ ಮನಸ್ತಾಪ ಉಂಟಾದೀತು. ಕೌಟುಂಬಿಕ ವಾಗ್ವಾದ.

Must Read

Skip to toolbar