November 24, 2026
Tuesday, November 24, 2026
spot_img

ಫಿಟ್ & ಫುಡ್ 23 | ಆರೋಗ್ಯಕ್ಕೂ, ರುಚಿಗೂ ಬೆಸ್ಟ್.. ಕೇವಲ ಇಪ್ಪತ್ತೇ ನಿಮಿಷದಲ್ಲಿ ಮಾಡಿ ಬಿಸಿಬಿಸಿ ರವೆ ಇಡ್ಲಿ

ಏನೇನ್ ಬೇಕು?

ಬಾಂಬೆ ರವೆ

ಗಟ್ಟಿ ಮೊಸರು

ನೀರು

ಎಣ್ಣೆ

ಸಾಸಿವೆ

ಜೀರಿಗೆ

ಕರಿಬೇವು

ಹಸಿಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

ಉಪ್ಪು

ಅಡುಗೆ ಸೋಡಾ

ಮಾಡೋದು ಹೇಗೆ ನೋಡಿಕೊಳ್ಳಿ

ಬಾಣಲೆಯಲ್ಲಿ ತುಪ್ಪ ಕಾಯಿಸಿ ಸಾಸಿವೆ, ಜೀರಿಗೆ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಒಗ್ಗರಣೆ ಹಾಕಿ. ನಂತರ ರವೆ ಹಾಕಿ ಸಣ್ಣ ಉರಿಯಲ್ಲಿ 2–3 ನಿಮಿಷ ಘಮ ಬರುವವರೆಗೆ ಹುರಿದು ತಣ್ಣಗಾಗಲು ಬಿಡಿ. ತಣ್ಣಗಾದ ರವೆಗೆ ಮೊಸರು, ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲಸಿ. 10 ನಿಮಿಷ ಮುಚ್ಚಿಡಿ. ಇಡ್ಲಿ ಬೇಯಿಸುವ ಮುನ್ನ ಸೋಡಾ ಸೇರಿಸಿ ನಿಧಾನವಾಗಿ ಒಂದು ಸುತ್ತು ತಿರುಗಿಸಿ. ಎಣ್ಣೆ ಸವರಿದ ಇಡ್ಲಿ ತಟ್ಟೆಗಳಿಗೆ ಹಾಕಿ, ಹಬೆಯಲ್ಲಿ 10–12 ನಿಮಿಷ ಬೇಯಿಸಿದರೆ ಮೃದುವಾದ ರವೆ ಇಡ್ಲಿ ಸಿದ್ಧ.

ಇದನ್ನ ತಿಂದ್ರೆ ಏನ್ ಲಾಭ?

ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಮತ್ತು ರವೆಯ ಹಗುರ ಗುಣ ಹೊಟ್ಟೆಗೆ ಆರಾಮ ನೀಡುತ್ತದೆ.

ರವೆಯಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಬೆಳಗಿನ ಹೊತ್ತು ದೇಹಕ್ಕೆ ಬೇಗನೆ ಶಕ್ತಿ ತುಂಬುತ್ತವೆ.

ನಾರಿನಂಶ ಇರುವುದರಿಂದ ಹಸಿವನ್ನು ಹತೋಟಿಯಲ್ಲಿಟ್ಟು, ಅನಗತ್ಯ ತಿಂಡಿ ತಿನ್ನುವುದನ್ನು ತಪ್ಪಿಸುತ್ತದೆ.

Must Read

Skip to toolbar