November 24, 2026
Tuesday, November 24, 2026
spot_img

ಹುರಿದ ಗೋಡಂಬಿ vs ಹಸಿ ಗೋಡಂಬಿ: ಯಾವ ರೀತಿಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?

ಮನೆಗಳಲ್ಲಿ ಹಬ್ಬ-ಹರಿದಿನ, ಸಿಹಿ ತಿಂಡಿ ಅಥವಾ ಸಂಜೆಯ ತಿಂಡಿಗೆ ಗೋಡಂಬಿ ಇದ್ದರೆ ಅದರ ಮಜವೇ ಬೇರೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಹಸಿ ಗೋಡಂಬಿ ಮತ್ತು ಹುರಿದ ಗೋಡಂಬಿ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಉತ್ತಮ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

ನಾವು ಮಾರುಕಟ್ಟೆಯಲ್ಲಿ ‘ಹಸಿ’ ಎಂದು ಕರೆಯುವ ಗೋಡಂಬಿ ಕೂಡ ಸಣ್ಣ ಪ್ರಮಾಣದ ಶಾಖದ ಪ್ರಕ್ರಿಯೆಯಿಂದಲೇ ಸಿದ್ಧವಾಗಿರುತ್ತದೆ. ಆದರೆ ಹೆಚ್ಚು ಹುರಿಯದ ಕಾರಣ ಇದರಲ್ಲಿ ಇರುವ ವಿಟಮಿನ್, ಖನಿಜ ಮತ್ತು ಆರೋಗ್ಯಕರ ಕೊಬ್ಬು ಹೆಚ್ಚಾಗಿ ಉಳಿದಿರುತ್ತದೆ. ದೇಹಕ್ಕೆ ಶಕ್ತಿ ನೀಡಲು, ಮೂಳೆಗಳ ಬಲಕ್ಕೆ ಮತ್ತು ಜೀರ್ಣಕ್ರಿಯೆಗೆ ಇದು ತುಂಬಾ ಸಹಕಾರಿ. ಅಡುಗೆಯಲ್ಲಿ ರುಚಿ ಮತ್ತು ಕ್ರೀಮಿ ಸತ್ವ ಹೆಚ್ಚಿಸಲು ಹಸಿ ಗೋಡಂಬಿ ಉತ್ತಮ ಆಯ್ಕೆ.

ಹುರಿದ ಗೋಡಂಬಿ ತನ್ನ ಗರಿಗರಿ ಗುಣ ಮತ್ತು ಘಮದಿಂದ ಎಲ್ಲರನ್ನೂ ಆಕರ್ಷಿಸುತ್ತದೆ. ಮನೆಯಲ್ಲಿಯೇ ಕಡಿಮೆ ಉರಿಯಲ್ಲಿ, ಹುರಿದರೆ ರುಚಿಯೂ ಇರುತ್ತದೆ, ಆರೋಗ್ಯವೂ ಕೆಡುವುದಿಲ್ಲ. ಆದರೆ ಅಂಗಡಿಗಳಲ್ಲಿ ಹೆಚ್ಚಿನ ಎಣ್ಣೆ, ಉಪ್ಪು ಅಥವಾ ಮಸಾಲೆ ಸೇರಿಸಿ ಹುರಿದ ಗೋಡಂಬಿಯನ್ನು ಅತಿಯಾಗಿ ತಿಂದರೆ ರಕ್ತದೊತ್ತಡ ಮತ್ತು ತೂಕ ಹೆಚ್ಚಳದಂತಹ ಸಮಸ್ಯೆಗಳು ಬರಬಹುದು.

ಯಾವುದೇ ಒಂದೇ ಆಹಾರವನ್ನು ಅತಿಯಾಗಿ ತಿನ್ನುವುದಕ್ಕಿಂತ ಮಿತವಾಗಿ ತಿನ್ನುವುದೇ ನಿಜವಾದ ಆರೋಗ್ಯದ ಗುಟ್ಟು. ನೈಸರ್ಗಿಕ ಪೋಷಕಾಂಶ ಬೇಕೆಂದರೆ ಹಸಿ ಗೋಡಂಬಿ ಉತ್ತಮ. ರುಚಿ ಮತ್ತು ಗರಿಗರಿಯ ಹಂಬಲವಿದ್ದರೆ ಮನೆಯಲ್ಲಿಯೇ ಹುರಿದ ಗೋಡಂಬಿಯನ್ನು ಮಿತವಾಗಿ ಸವಿಯಬಹುದು. ಸಣ್ಣ ಪ್ರಮಾಣದ ಗೋಡಂಬಿ ನಮ್ಮ ದಿನನಿತ್ಯದ ಆಹಾರದಲ್ಲಿ ದೊಡ್ಡ ಶಕ್ತಿಯಾಗಿ ಕೆಲಸ ಮಾಡುತ್ತದೆ.

Must Read

Skip to toolbar