November 24, 2026
Tuesday, November 24, 2026
spot_img

ಫೇಸ್‌ಬುಕ್‌ನಿಂದ PUBGವರೆಗೆ 87 ಆ್ಯಪ್‌ಗಳಿಗೆ ಸೇನೆಯಿಂದ ನಿಷೇಧ! ಸೈನಿಕರಿಗೆ ಕಟ್ಟುನಿಟ್ಟಿನ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಮಾರ್ಟ್‌ಫೋನ್ ಬಳಕೆ ಇಂದು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಸಾಮಾಜಿಕ ಜಾಲತಾಣ, ಆನ್‌ಲೈನ್ ಶಾಪಿಂಗ್, ಗೇಮಿಂಗ್ ಹೀಗೆ ಹಲವು ಉದ್ದೇಶಗಳಿಗೆ ನೂರಾರು ಆ್ಯಪ್‌ಗಳನ್ನು ಬಳಸುತ್ತೇವೆ. ಆದರೆ ದೇಶದ ಭದ್ರತೆಯ ಹೊಣೆ ಹೊತ್ತಿರುವ ಭಾರತೀಯ ಸೇನೆಯ ಸಿಬ್ಬಂದಿಗೆ ಮಾತ್ರ ಇನ್ನು ಮುಂದೆ ಕೆಲವು ಜನಪ್ರಿಯ ಆ್ಯಪ್‌ಗಳ ಬಳಕೆ ದುಬಾರಿಯಾಗಬಹುದು. ದತ್ತಾಂಶ ಸೋರಿಕೆ ಮತ್ತು ಸೂಕ್ಷ್ಮ ಮಾಹಿತಿಯ ದುರ್ಬಳಕೆಯ ಆತಂಕದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ತನ್ನ ಸೈನಿಕರು, ಜವಾನರು ಮತ್ತು ಅಧಿಕಾರಿಗಳಿಗೆ 87 ಮೊಬೈಲ್ ಆ್ಯಪ್‌ಗಳನ್ನು ಬಳಸದಂತೆ ಸಲಹೆ ನೀಡಿದೆ.

ಯಾವೆಲ್ಲ ಜನಪ್ರಿಯ ಆ್ಯಪ್‌ಗಳಿಗೆ ನಿರ್ಬಂಧ?

ಸೇನೆಯ ‘ಬ್ಯಾನ್ ಆ್ಯಪ್ಸ್’ ಪಟ್ಟಿಯಲ್ಲಿ ಸಾಮಾಜಿಕ ಜಾಲತಾಣ, ಮೆಸೇಜಿಂಗ್, ವಿಡಿಯೋ, ಆನ್‌ಲೈನ್ ಶಾಪಿಂಗ್, ಡೇಟಿಂಗ್, ಗೇಮಿಂಗ್ ಹಾಗೂ ವೆಬ್ ಬ್ರೌಸಿಂಗ್ ಸೇರಿದಂತೆ ಹಲವು ವಿಭಾಗಗಳ ಆ್ಯಪ್‌ಗಳಿವೆ.

ಫೇಸ್‌ಬುಕ್, ಸ್ನ್ಯಾಪ್‌ಚಾಟ್, ಟಿಕ್‌ಟಾಕ್, PUBG, ಟಿಂಡರ್, ಬಂಬಲ್, ಶೀನ್, ಅಲಿಎಕ್ಸ್‌ಪ್ರೆಸ್, ಜೂಮ್ ಮತ್ತು ವೈಬರ್ ಪ್ರಮುಖವಾಗಿ ಪಟ್ಟಿಯಲ್ಲಿವೆ.

ಮೆಸೇಜಿಂಗ್ ಮತ್ತು ಡೇಟಿಂಗ್ ಆ್ಯಪ್‌ಗಳೂ ಪಟ್ಟಿಯಲ್ಲಿ

ಇದನ್ನೂ ಓದಿ:

ವೀಚಾಟ್, QQ, ಕಿಕ್, ನಿಂಬಜ್, ಹೆಲೋ, ಶೇರ್‌ಚಾಟ್, ಲೈನ್, ಇಮೋ, ಹೈಕ್ ಮತ್ತು ಟೊಟಾಕ್ ಸೇರಿದಂತೆ ಹಲವು ಮೆಸೇಜಿಂಗ್ ಆ್ಯಪ್‌ಗಳನ್ನು ಬಳಸದಂತೆ ಸೂಚಿಸಲಾಗಿದೆ.

ಇನ್ನು ಟಿಂಡರ್, ಟ್ರೂಲಿಮ್ಯಾಡ್ಲಿ, ಹ್ಯಾಪನ್, ಬಂಬಲ್, ಓಕೆಕ್ಯುಪಿಡ್, ಹಿಂಜ್ ಮತ್ತು ಬಾಡೂ ಸೇರಿದಂತೆ ಹಲವು ಡೇಟಿಂಗ್ ಆ್ಯಪ್‌ಗಳೂ ಈ ಪಟ್ಟಿಯಲ್ಲಿವೆ.

ಶಾಪಿಂಗ್, ಗೇಮಿಂಗ್ ಆ್ಯಪ್‌ಗಳಿಗೂ ನಿರ್ಬಂಧ

ಆನ್‌ಲೈನ್ ಶಾಪಿಂಗ್ ವಿಭಾಗದಲ್ಲಿ ಅಲಿಎಕ್ಸ್‌ಪ್ರೆಸ್, ಕ್ಲಬ್ ಫ್ಯಾಕ್ಟರಿ, ಗೇರ್‌ಬೆಸ್ಟ್, ಬಾಂಗ್‌ಗೂಡ್, ಶೀನ್ ಮತ್ತು ರೋಸ್‌ಗಾಲ್ ಆ್ಯಪ್‌ಗಳನ್ನು ಉಲ್ಲೇಖಿಸಲಾಗಿದೆ. PUBG, ಕ್ಲ್ಯಾಶ್ ಆಫ್ ಕಿಂಗ್ಸ್, ಮೊಬೈಲ್ ಲೆಜೆಂಡ್ಸ್ ಸೇರಿದಂತೆ ಗೇಮಿಂಗ್ ಆ್ಯಪ್‌ಗಳಿಗೂ ನಿರ್ಬಂಧದ ಸೂಚನೆ ನೀಡಲಾಗಿದೆ.

ಇದಲ್ಲದೆ, ಕ್ಯಾಮ್‌ಸ್ಕ್ಯಾನರ್, ಬ್ಯೂಟಿ ಪ್ಲಸ್, ಟ್ರೂಕಾಲರ್, ಯುಸಿ ಬ್ರೌಸರ್, ನ್ಯೂಸ್‌ಡಾಗ್, ಡೈಲಿಹಂಟ್, ರೆಡ್ಡಿಟ್ ಮತ್ತು 360 ಸೆಕ್ಯುರಿಟಿಯಂತಹ ಆ್ಯಪ್‌ಗಳೂ ಪಟ್ಟಿಯಲ್ಲಿವೆ.

ನಿರ್ಬಂಧಕ್ಕೆ ಕಾರಣವೇನು?

ಮೊಬೈಲ್ ಆ್ಯಪ್‌ಗಳು ಬಳಕೆದಾರರ ಸಂಪರ್ಕ ವಿವರಗಳು, ವೈಯಕ್ತಿಕ ಮಾಹಿತಿ, ಸಂವಹನ ಮತ್ತು ಸಾಧನಕ್ಕೆ ಸಂಬಂಧಿಸಿದ ದತ್ತಾಂಶವನ್ನು ಪ್ರವೇಶಿಸುವ ಸಾಧ್ಯತೆಯಿರುತ್ತದೆ. ಸೇನಾ ಸಿಬ್ಬಂದಿ ಇಂತಹ ಆ್ಯಪ್‌ಗಳನ್ನು ಬಳಸುವುದರಿಂದ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗುವ ಅಥವಾ ದುರ್ಬಳಕೆಯಾಗುವ ಅಪಾಯವಿದೆ ಎಂಬುದು ಈ ಮುನ್ನೆಚ್ಚರಿಕೆಯ ಹಿಂದಿನ ಪ್ರಮುಖ ಕಾರಣವಾಗಿದೆ.

Must Read

Skip to toolbar