February 2, 2026
Monday, February 2, 2026
spot_img

ಬಲೂಚಿಸ್ತಾನದಲ್ಲಿ ಆತ್ಮಾಹುತಿ ದಾಳಿ: ಮಹಿಳಾ ದಾಳಿಕೋರರ ಚಿತ್ರ ಬಿಡುಗಡೆ ಮಾಡಿದ ಬಿಎಲ್‌ಎ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಹಿಂಸಾಚಾರ ತೀವ್ರಗೊಂಡಿರುವ ನಡುವೆ, ನಿಷೇಧಿತ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಐಎಸ್‌ಐ ಶಿಬಿರದ ಮೇಲೆ ನಡೆದ ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಮಹಿಳಾ ದಾಳಿಕೋರರ ಚಿತ್ರಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡಿದೆ.

ಈ ಬೆಳವಣಿಗೆ ಬಲೂಚ್ ಉಗ್ರ ಸಂಘಟನೆಗಳ ತಂತ್ರಗಳಲ್ಲಿ ಕಂಡುಬರುವ ಮಹತ್ವದ ಬದಲಾವಣೆಯಾಗಿ ಪರಿಗಣಿಸಲಾಗುತ್ತಿದೆ.

ಬಿಎಲ್‌ಎ ಮಾಹಿತಿ ಪ್ರಕಾರ, ದಾಳಿಕೋರರಲ್ಲಿ ಒಬ್ಬರು ನುಷ್ಕಿ ಜಿಲ್ಲೆಯ ನಿವಾಸಿ 24 ವರ್ಷದ ಆಸಿಫಾ ಮೆಂಗಲ್. 2002ರಲ್ಲಿ ಜನಿಸಿದ ಅವರು, ಮಜೀದ್ ಬ್ರಿಗೇಡ್ ಎಂಬ ಬಿಎಲ್‌ಎಯ ಆತ್ಮಾಹುತಿ ಘಟಕಕ್ಕೆ ಸೇರ್ಪಡೆಯಾಗಿ ನಂತರ ಐಎಸ್‌ಐ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ದಾಳಿಕೋರಳಾಗಿ ಹವಾ ಬಲೂಚ್ ಎಂಬ ಮಹಿಳೆಯನ್ನು ಗುರುತಿಸಲಾಗಿದೆ. ಅವರ ತಂದೆ 2021ರಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ:

ಬಿಎಲ್‌ಎ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಹವಾ ಬಲೂಚ್ ಶಸ್ತ್ರಸಜ್ಜಿತ ಉಗ್ರರ ಜೊತೆ ಕಾಣಿಸಿಕೊಂಡು ಪಾಕಿಸ್ತಾನ ಸರ್ಕಾರದ ವಿರುದ್ಧ ಕಟು ಟೀಕೆಗಳನ್ನು ಮಾಡಿರುವುದು ಕಂಡುಬರುತ್ತದೆ. ಇತ್ತೀಚಿನ ಸಂಘಟಿತ ದಾಳಿಗಳಲ್ಲಿ ಕನಿಷ್ಠ 17 ಭದ್ರತಾ ಸಿಬ್ಬಂದಿ ಸೇರಿ ಸುಮಾರು 50 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !