ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡುತ್ತಾ, ಅಮೆರಿಕದೊಂದಿಗಿನ ಪಾಕಿಸ್ತಾನದ ಸಂಬಂಧದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅಮೆರಿಕವು ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತಲೂ ಕೀಳಾಗಿ ಬಳಸಿಕೊಂಡಿದೆ” ಎಂದು ಅವರು ಕಿಡಿಕಾರಿದ್ದಾರೆ.
2001ರ ನಂತರ ಅಮೆರಿಕದ ‘ಭಯೋತ್ಪಾದನೆ ವಿರುದ್ಧದ ಯುದ್ಧ’ಕ್ಕೆ ಬೆಂಬಲ ನೀಡಿದ್ದು ಪಾಕಿಸ್ತಾನ ಮಾಡಿದ ಬಹುದೊಡ್ಡ ತಪ್ಪು ಎಂದು ಅವರು ಒಪ್ಪಿಕೊಂಡಿದ್ದಾರೆ.
ಈ ನಿರ್ಧಾರದಿಂದಾಗಿ ಪಾಕಿಸ್ತಾನವು ಇಂದಿಗೂ ಹಿಂಸಾಚಾರ, ಮೂಲಭೂತವಾದ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಅಮೆರಿಕ ತನ್ನ ಕೆಲಸ ಮುಗಿದ ಮೇಲೆ ಪಾಕಿಸ್ತಾನವನ್ನು ಸಂಕಷ್ಟಕ್ಕೆ ತಳ್ಳಿ ದೂರ ಸರಿದಿದೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ:
ಬೇರೆಯವರ ಹಿತಾಸಕ್ತಿಗಾಗಿ ನಡೆದ ಯುದ್ಧದಲ್ಲಿ ಪಾಕಿಸ್ತಾನ ಕೇವಲ ಒಂದು ‘ಕೈಗೊಂಬೆ’ಯಾಗಿ ಬಳಕೆಯಾಯಿತು ಮತ್ತು ಇದರಿಂದ ಸಂಭವಿಸಿದ ನಷ್ಟವನ್ನು ಎಂದಿಗೂ ತುಂಬಿಕೊಡಲು ಸಾಧ್ಯವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.



