ಇತ್ತೀಚೆಗೆ ಯಂಗ್ ಜನರ ನಡುವೆ “6-7 ಡೇಟಿಂಗ್” ಅನ್ನೋ ಹೊಸ ಟ್ರೆಂಡ್ ತುಂಬಾ ವೈರಲ್ ಆಗ್ತಿದೆ. ಇಂದಿನ ಡೇಟಿಂಗ್ ಆಪ್ಗಳು, ಲೇಟ್ ನೈಟ್ ಪಾರ್ಟಿಗಳು ಮತ್ತು ಸಿಚುಯೇಷನ್ಶಿಪ್ಗಳಿಂದ ಬೇಸತ್ತ ಯುವಜನತೆ ಈಗ ಹೊಸ ಟ್ರೆಂಡ್ ಕಡೆ ತಿರುಗಿದ್ದಾರೆ. ಅದೇ ‘6–7 ಡೇಟಿಂಗ್’.
ಇದು ಸಮಯದ ನಿಯಮ ಮಾತ್ರವಲ್ಲ, ಸುರಕ್ಷತೆ ಮತ್ತು ನೆಮ್ಮದಿಗೆ ಆದ್ಯತೆ ಕೊಡುವ ಹೊಸ ಕಲ್ಪನೆ. ಈ ಟ್ರೆಂಡ್ನಲ್ಲಿ ಜೋಡಿಗಳು ಸಂಜೆ 6 ಅಥವಾ 7 ಗಂಟೆ ವೇಳೆಗೆ ಭೇಟಿಯಾಗಿ, ಶಾಂತವಾಗಿ ಮಾತುಕತೆ ನಡೆಸುತ್ತಾರೆ. ತಡರಾತ್ರಿ ಡಿನ್ನರ್ ಅಥವಾ ಪಾರ್ಟಿಗಳಿಗೆ ಬದಲು, ಕಾಫಿ ಅಥವಾ ಲಘು ಉಪಹಾರದ ಜೊತೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಮಯ ಕೊಡುತ್ತಾರೆ.
ಇದನ್ನೂ ಓದಿ:
ಈ ರೀತಿಯ ಭೇಟಿಗಳು ಹೆಚ್ಚು ಸುರಕ್ಷಿತವಾಗಿರುತ್ತವೆ, ಏಕೆಂದರೆ ಜನಸಂಚಾರ ಇರುವ ಸಮಯದಲ್ಲಿ ಡೇಟ್ ನಡೆಯುತ್ತದೆ. ಜೊತೆಗೆ, ರಾತ್ರಿ ತಡವರೆಗೆ ಹೊರಗಿರುವುದರಿಂದ ನಿದ್ರೆ ಮತ್ತು ದಿನಚರಿಯ ಮೇಲೆ ಆಗುವ ಪರಿಣಾಮವೂ ಕಡಿಮೆಯಾಗುತ್ತದೆ. ಕುಡಿಯುವ ಸಂಸ್ಕೃತಿಗಿಂತ ಮಾತುಕತೆಗೂ, ವ್ಯಕ್ತಿತ್ವ ಅರಿಯುವುದಕ್ಕೂ ಹೆಚ್ಚಿನ ಮಹತ್ವ ಸಿಗುತ್ತದೆ.
ತಜ್ಞರ ಪ್ರಕಾರ, ಈ ಟ್ರೆಂಡ್ ಸಂಬಂಧಗಳಿಗೆ ಗಂಭೀರತೆ ತರಲು ಸಹಾಯಕ. ಮೋಜು ಮಾತ್ರವಲ್ಲ, ನಿಜವಾದ ಸಂಬಂಧವನ್ನು ಕಟ್ಟಿಕೊಳ್ಳಲು ಇದು ಉತ್ತಮ ಆರಂಭವಾಗಬಹುದು.



