February 14, 2026
Saturday, February 14, 2026
spot_img

ಇಂತಹ ‘ಮಹಾಮುರ್ಖ’ ಎಲ್‌ಒಪಿಯನ್ನು ನಾನು ಎಂದಿಗೂ ನೋಡಿಲ್ಲ: ರಾಹುಲ್ ಗಾಂಧಿ ವಿರುದ್ಧ ದುಬೆ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಭಾರತ-ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಭಾರತದ ಹತ್ತಿ ರೈತರು ಮತ್ತು ಜವಳಿ ರಫ್ತುದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ರಾಹುಲ್ ಗಾಂಧಿ ಮಾಡಿದ ಟೀಕೆಗೆ ಅವರು ಪ್ರತಿಕ್ರಿಯಿಸಿದ ಅವರು, ರೈತರನ್ನು ರಕ್ಷಿಸಲು ಪ್ರಧಾನಿ ಮೋದಿ ನಾನಾ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ. ಅದರಲ್ಲೂ ಹತ್ತಿ ಬೆಳೆಯುವ ರೈತರನ್ನು ರಕ್ಷಿಸಲು, ಹತ್ತಿಯ ಮೇಲೆ ಶೇ 11 ರಷ್ಟು ಆಮದು ಸುಂಕ ವಿಧಿಸುವ ನೀತಿಯನ್ನು ಜಾರಿಗೆ ತಂದಿದ್ದಾರೆ. ಜೊತೆಗೆ ಜಾಗತಿಕವಾಗಿ, ವಿಶೇಷವಾಗಿ ವಿಯೆಟ್ನಾಂನಂತಹ ದೇಶಗಳ ವಿರುದ್ಧ ಜವಳಿ ವಲಯವನ್ನು ಬೆಂಬಲಿಸಲು ಮತ್ತು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಕೆಲಸ ನಡೆಯುತ್ತಿದೆ. ಆದ್ರೆ ರಾಹುಲ್ ಗಾಂಧಿ ವ್ಯಾಪಾರ ಒಪ್ಪಂದವನ್ನು ಟೀಕಿಸುತ್ತಿದ್ದಾರೆ. ಈ ದೇಶದಲ್ಲಿ ಇಂತಹ ‘ಮಹಾಮುರ್ಖ’ ಎಲ್‌ಒಪಿಯನ್ನು ನಾನು ಎಂದಿಗೂ ನೋಡಿಲ್ಲ ಎಂದು ದುಬೆ ತಿಳಿಸಿದ್ದಾರೆ.

ಅಸಂಬದ್ಧ ವಿಚಾರವನ್ನು ಹೇಳಲು, ಇತರರನ್ನು ಪ್ರಚೋದಿಸಲು ಮತ್ತು ದೇಶದ್ರೋಹದಲ್ಲಿ ತೊಡಗಿಸಿಕೊಳ್ಳುವುದನ್ನು ಯಾರಾದರೂ ಕಲಿಯಲು ಬಯಸಿದರೆ, ಅಂಥವರು ರಾಹುಲ್ ಗಾಂಧಿಯಿಂದ ಕಲಿಯಬೇಕು ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !