October 10, 2026
Saturday, October 10, 2026
spot_img

CINE | 2 ತಿಂಗಳು ಕಳೆದಿದೆ ಆದ್ರೂ ‘ಧುರಂಧರ್’ ಬಿರುಗಾಳಿ ತಣ್ಣಗಾಗಿಲ್ಲ: ಗಲ್ಲಾಪೆಟ್ಟಿಗೆ ಇನ್ನೂ ಫುಲ್ ಆಗಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧುರಂಧರ್ ಚಿತ್ರ ಬಿಡುಗಡೆಗೊಂಡು 2 ತಿಂಗಳು ಕಳೆದರೂ ಪ್ರೇಕ್ಷಕರ ಮೆಚ್ಚುಗೆ ಕಡಿಮೆಯಾಗಿಲ್ಲ. ನಿರ್ದೇಶಕ ಆದಿತ್ಯ ಧರ್ ರೂಪಿಸಿದ ಈ ಸ್ಪೈ ಥ್ರಿಲ್ಲರ್ ಚಿತ್ರ ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದು, ಈಗ ಮತ್ತೊಂದು ಸಾಧನೆ ಮಾಡಿದೆ.

59 ದಿನಗಳ ಕಾಲ ಬುಕ್ ಮೈ ಶೋದಲ್ಲಿ ಟ್ರೆಂಡ್ ಆಗಿ ಅತ್ಯಧಿಕ ದಿನಗಳ ದಾಖಲೆಯನ್ನು ನಿರ್ಮಿಸಿದೆ. ಇದಕ್ಕೂ ಮೊದಲು ಛಾವಾ 58 ದಿನ ಟ್ರೆಂಡ್ ಆಗಿತ್ತು. ಇದೀಗ ಧುರಂಧರ್ ಅದನ್ನು ಮೀರಿಸಿದೆ. ರಣವೀರ್ ಸಿಂಗ್ ಹಾಗೂ ಅಕ್ಷಯ್ ಖನ್ನಾ ಅಭಿನಯಿಸಿದ ಈ ಚಿತ್ರ 1300 ಕೋಟಿ ರೂಪಾಯಿ ಗಡಿ ದಾಟಿದ್ದು, ಅದರಲ್ಲಿ 800 ಕೋಟಿ ರೂಪಾಯಿ ಭಾರತದಲ್ಲೇ ಸಂಗ್ರಹವಾಗಿದೆ. 2ನೇ ವಾರದಲ್ಲೇ 253 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.

ಇದನ್ನೂ ಓದಿ:

8 ವಾರಗಳ ಬಳಿಕ ಒಟಿಟಿಗೆ ಬಂದರೂ ಪ್ರತಿದಿನ 25 ರಿಂದ 30 ಲಕ್ಷ ರೂಪಾಯಿ ಆದಾಯ ತರುತ್ತಿದೆ. ಈಗ ‘ಧುರಂಧರ್: ದ ರಿವೆಂಜ್’ ಎಂಬ ಮುಂದಿನ ಭಾಗ 19 ಮಾರ್ಚ್ ರಂದು ಬಿಡುಗಡೆಯಾಗಲಿದೆ.

Must Read