April 9, 2026
Thursday, April 9, 2026
spot_img

WEATHER | ಶಿವರಾತ್ರಿ ಮುಗಿಯುತ್ತಿದ್ದಂತೆಯೇ ಬೇಸಿಗೆ ಅನುಭವ ಶುರು, ಸ್ವಲ್ಪವೂ ಚಳಿ ಇಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದೆ, ಮಾರುಕಟ್ಟೆಯಲ್ಲಿ ನಿಧಾನಕ್ಕೆ ಮಾವು, ಹಲಸು, ಕಲ್ಲಂಗಡಿ ಹಣ್ಣುಗಳು ಕಾಣಿಸುತ್ತಿವೆ. ಬೆಳಗ್ಗೆ ಏಳೋಕೂ ಆಗದ ಚಳಿ ಇದ್ದ ಸಮಯ ಇದೀಗ ಸಂಪೂರ್ಣವಾಗಿ ಬದಲಾಗಿದೆ.

ಶಿವರಾತ್ರಿ ಮುಗಿದ ನಂತರ ಚಳಿಯಿರೋದಿಲ್ಲ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದೆ. ರಾಜ್ಯದ ಯಾವುದೇ ಭಾಗದ ಜನರಿಗೆ ಚಳಿಯ ಅನುಭವವಾಗಿಲ್ಲ. ಬದಲಿಗೆ ರಗ್‌,ದಪ್ಪ ಬೆಡ್‌ಶೀಟ್‌ಗಳನ್ನು ಬದಲಾಯಿಸುವ ಸಮಯ ಬಂದಿದೆ.

ಈ ಬಾರಿಯೂ ಅವಧಿಗೆ ಮುನ್ನವೇ ಬೇಸಿಗೆ ಆರಂಭವಾಗಿದೆ. ಕನಿಷ್ಠ ತಾಪಮಾನ ವಾಡಿಕೆಯಷ್ಟೆ ಇದ್ದರೂ ಈಗಾಗಲೇ ಕರಾವಳಿ ಮತ್ತಿತರ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ ಸುಮಾರು 2-3 ಡಿಗ್ರಿಯಷ್ಟು ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಂಜೆ ಹಾಗೂ ಮುಂಜಾನೆ ವೇಳೆ ಚಳಿ ಇರಲಿದ್ದು, ಮಧ್ಯಾನ ಬಿಸಿಲಿನಿಂದ ಕೂಡಿದ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !