October 18, 2026
Sunday, October 18, 2026
spot_img

ಸಾಮಾನ್ಯಕ್ಕಿಲ್ಲ ವಿಜಯ್‌-ರಶ್ಮಿಕಾ ಮದುವೆ, ಬರುವ ಗೆಸ್ಟ್‌ಗಳಿಗೆ ವಿದೇಶಿ ಸಂಸ್ಥೆಯಿಂದ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ಯೂಟೆಸ್ಟ್‌ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಇನ್ನೇನು ಕೆಲವೇ ದಿನಗಳಲ್ಲಿ ಪತಿ-ಪತ್ನಿಯಾಗಲಿದ್ದಾರೆ.

ಫೆಬ್ರವರಿ 26ರಂದು ಉದಯಪುರದ ಪ್ಯಾಲೇಸ್‌ ಒಂದರಲ್ಲಿ ಮದುವೆ ನಡೆಯಲಿದೆ. ಇನ್ನೂನು ಐದು ದಿನದಲ್ಲಿ ಮದುವೆ ಇದ್ದರೂ ರಶ್ಮಿಕಾ ಅಥವಾ ವಿಜಯ್‌ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇನ್ನು ಈ ಮದುವೆಯಲ್ಲಿ ಬಿಗಿ ಭದ್ರತೆ ಇರಲಿದೆ. ನೋ ಫೋನ್‌ ಪಾಲಿಸಿ ಕೂಡ ಇದೆ. ಬರೀ ಕುಟುಂಬದವರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಸ್ಥಳೀಯ ಪೊಲೀಸರ ಜತೆಗೆ ವಿದೇಶಿ ಭದ್ರತಾ ಸಿಬ್ಬಂದಿ ಕಣ್ಗಾವಲು ಇದೆ.

ಫೆಬ್ರವರಿ 26 ರಂದು ಉದಯಪುರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಶಾಸ್ತ್ರಗಳು ನೆರವೇರಲಿದ್ದು, ಬಳಿಕ ಮಾರ್ಚ್ 4 ರಂದು ಹೈದರಾಬಾದ್‌ ತಾಜ್ ಕೃಷ್ಣನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಮತ್ತು ಸ್ನೇಹಿತರಿಗಾಗಿ ಅದ್ದೂರಿ ರಿಸೆಪ್ಷನ್ ಏರ್ಪಡಿಸಲಾಗಿದೆ.

Must Read