February 23, 2026
Monday, February 23, 2026
spot_img

ಮಾ.03ಕ್ಕೆ ಈ ವರ್ಷದ ಮೊದಲ ಚಂದ್ರಗ್ರಹಣ: ಭಾರತದಲ್ಲಿ 25 ನಿಮಿಷ ಗೋಚರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್ 3ರಂದು ಫಾಲ್ಗುಣ ಪೂರ್ಣಿಮೆಯಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಚಂದ್ರನು ಸಿಂಹ ರಾಶಿಯಲ್ಲಿ ಸಂಚರಿಸುವಾಗ, ಪೂರ್ವ ಫಾಲ್ಗುಣಿ ನಕ್ಷತ್ರದಲ್ಲಿ ಈ ಗ್ರಹಣ ಉಂಟಾಗಲಿದೆ. ಅವಧಿ ದೃಷ್ಟಿಯಿಂದ ಇದು ವರ್ಷದ ದೀರ್ಘ ಚಂದ್ರಗ್ರಹಣವೆಂದು ಹೇಳಲಾಗುತ್ತಿದೆ.

ಗ್ರಹಣ ಪ್ರಕ್ರಿಯೆ ಮಧ್ಯಾಹ್ನ 3:20ರಿಂದ ಆರಂಭವಾಗಿ ಸಂಜೆ 6:47ರವರೆಗೆ ಮುಂದುವರಿಯಲಿದೆ. ಸಂಪೂರ್ಣ ಗ್ರಹಣ ಹಂತ ಸಂಜೆ 4:34ಕ್ಕೆ ಪ್ರಾರಂಭವಾಗಲಿದೆ. ಒಟ್ಟಾರೆ ಅವಧಿ ಸುಮಾರು 3 ಗಂಟೆ 27 ನಿಮಿಷಗಳಾಗುತ್ತದೆ. ಇದು ಸುಮಾರು 25 ನಿಮಿಷಗಳ ಕಾಲ ಭಾರತದಲ್ಲಿ ಗೋಚರಿಸುತ್ತದೆ.

ಇದನ್ನೂ ಓದಿ:

ಭಾರತದಲ್ಲಿ ಚಂದ್ರೋದಯ ಸಂಜೆ 6:22ರ ಸುಮಾರಿಗೆ ನಡೆಯುವ ಕಾರಣ, ಗ್ರಹಣದ ಕೊನೆಯ ಕ್ಷಣಗಳು ಮಾತ್ರ ಕಾಣಿಸಿಕೊಳ್ಳಲಿವೆ. ಅಂದಾಜು 20ರಿಂದ 25 ನಿಮಿಷಗಳ ಕಾಲವೇ ದೃಶ್ಯ ಲಭ್ಯವಾಗಬಹುದು. ರಾಜ್ಯದ್ಯಂತ ಚಂದ್ರೋದಯ ಸಮಯದಲ್ಲಿ ವ್ಯತ್ಯಾಸ ಇರುವುದರಿಂದ, ಗೋಚರಿಸುವ ಅವಧಿಯಲ್ಲೂ ಸ್ವಲ್ಪ ಬದಲಾವಣೆ ಸಾಧ್ಯ.

ಗ್ರಹಣದ ದಿನ ಸೂತಕ ಅವಧಿ ಅನ್ವಯವಾಗಲಿದ್ದು, ಧಾರ್ಮಿಕ ವಿಧಿವಿಧಾನಗಳ ಕುರಿತು ಭಕ್ತರು ಸಜ್ಜಾಗುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !