April 15, 2026
Wednesday, April 15, 2026
spot_img

ಸುಳ್ಯ ತಾಲೂಕಿನಲ್ಲಿ ಗುಡುಗು, ಗಾಳಿ ಸಹಿತ ಬಿರುಸಿನ ಮಳೆ: ಮನೆ ಮೇಲೆ ಉರುಳಿದ ಮರ

ಹೊಸದಿಗಂತ ವರದಿ,ಸುಳ್ಯ:

ಸುಳ್ಯ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಗುಡುಗು, ಗಾಳಿಯ ಅಬ್ಬರದೊಂದಿಗೆ ಮಳೆ ಸುರಿದಿದ್ದು ಸಂಪಾಜೆ ಗ್ರಾಮದಲ್ಲಿ ಒಂದು ಮನೆಯ ಮೇಲೆ ಮರ ಬಿದ್ದು ಮನೆ ಮೇಲ್ಚಾವಣಿ ಧ್ವಂಸಗೊಂಡ ಘಟನೆ ನಡೆದಿದೆ.

ಸುಳ್ಯ ಪಟ್ಟಣ , ಬೆಳ್ಳಾರೆ , ಸಂಪಾಜೆ ಗ್ರಾಮಗಳಲ್ಲಿ ಗಾಳಿ, ಗುಡುಗಿನ ಅಬ್ಬರದೊಂದಿಗೆ ಸಾಧಾರಣ ಮಳೆಯಾಗಿದ್ದು ಕಲ್ಮಡ್ಕ ಕುಕ್ಕುಜಡ್ಕ , ಬಾಳಿಲ, ದೊಡ್ಡತೋಟ, ಪಂಜ, ಸಂಪಾಜೆ, ಜಾಲ್ಸೂರು ಸೇರಿದಂತೆ ವಿವಿಧೆಡೆಗಳಲ್ಲಿ ಮಳೆಯಾಗಿದೆ. ಕೆಲವೆಡೆಗಳಲ್ಲಿ ತುಂತುರು ಮಳೆಯಾದರೆ, ಕೆಲವೆಡೆ ಉತ್ತಮ ಮಳೆಯಾಗಿದೆ.

ಇತ್ತ ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿ ರಾಜ ಮತ್ತು ಜಯ ಎಂಬುವವರ ಮನೆಯ ಮೇಲ್ಚಾವಣಿಯ ಮೆಲೆ ಮರಬಿದ್ದ ಪರಿಣಾಮ ಮನೆ ಧ್ವಂಸಗೊಂಡಿದ್ದು ಮರ ತೆರವು ಕಾರ್ಯ ಇನ್ನಷ್ಟೆ ಆಗಬೇಕಿದ್ದು ಇತ್ತ ಎರಡನೇ ಮಳೆಗೆ ಮರಗಳು ಉರುಳಿ ಬೀಳುತ್ತಿರುವುದು ವಿಪರ್ಯಾಸವಾದರೆ ಇತ್ತ ಅಕಾಲಿಕ ಮಳೆ ಅಡಿಕೆ ಒಣಗಿಸುವುದು ಮತ್ತಿತರ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಗಳನ್ನು ತಂದೊಡ್ಡಿರುವುದು ಸ್ಪಸ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !