September 26, 2026
Saturday, September 26, 2026
spot_img

LIFE | ಒಂದು ದಿನನಾದ್ರೂ ಈ ಫೋನ್ ನಿಂದ ದೂರ ಇರ್ಬೇಕು ಅನ್ಸಿಲ್ವಾ? ಸ್ವಲ್ಪ ಡಿಜಿಟಲ್ ವಿರಾಮ ತಗೋಳಿ

ನಿಮ್ಮ ದಿನ ಶುರುವಾಗೋದು ಫೋನ್‌ ನೋಡುತ್ತಲೇನಾ? ಕಣ್ಣು ತೆರೆಯೋ ಮುಂಚೆನೇ ನೋಟಿಫಿಕೇಶನ್‌ಗಳನ್ನು ಪರಿಶೀಲಿಸುವ ಅಭ್ಯಾಸ ಇದೆಯಾ? ಒಂದು ಕ್ಷಣ ನಿಲ್ಲಿ ಯೋಚಿಸಿ… ಈ ನಿರಂತರ ಆನ್‌ಲೈನ್‌ ಜೀವನ ನಿಜವಾಗಿಯೂ ಇಷ್ಟು ಅಗತ್ಯವೇ ಅಂತ?

ಸಾಮಾಜಿಕ ಜಾಲತಾಣಗಳು ನಮ್ಮನ್ನು ಜಗತ್ತಿಗೆ ಕನೆಕ್ಟ್ ಮಾಡುತ್ತವೆ. ಆದರೆ ಅದೇ ಸಮಯದಲ್ಲಿ ಹೋಲಿಕೆ, ಆತಂಕ ಮತ್ತು ಅನಗತ್ಯ ಒತ್ತಡವನ್ನೂ ಉಂಟುಮಾಡುತ್ತವೆ. ಇತರರ ಯಶಸ್ಸು, ಪ್ರವಾಸ, ಪರ್ಫೆಕ್ಟ್ ಚಿತ್ರಗಳನ್ನು ನೋಡುತ್ತಾ ನೋಡುತ್ತಾ ನಮ್ಮ ಜೀವನವೇ ಸರಿಯಿಲ್ಲ ಅನ್ನಿಸುವ ಭ್ರಮೆ ಹುಟ್ಟಬಹುದು.

ಇದನ್ನೂ ಓದಿ:

ಒಮ್ಮೆ ಪ್ರಯತ್ನಿಸಿ ನೋಡಿ. ಒಂದು ದಿನವಾದರೂ ಫೋನ್‌ ಅನ್ನು ದೂರ ಇಡಿ. ಬೆಳಗಿನ ಸಮಯವನ್ನು ನಿಮ್ಮಿಗಾಗಿ ಉಳಿಸಿಕೊಳ್ಳಿ. ಪುಸ್ತಕ ಓದಿ, ಮನೆಯವರ ಜೊತೆ ಮಾತಾಡಿ, ಅಥವಾ ನಿಶ್ಶಬ್ದವಾಗಿ ಕುಳಿತು ನಿಮ್ಮ ಆಲೋಚನೆಗಳನ್ನು ಕೇಳಿ. ಆ ಶಾಂತಿ ನಿಮ್ಮೊಳಗಿನ ಗೊಂದಲವನ್ನು ನಿಧಾನವಾಗಿ ಕಡಿಮೆ ಮಾಡುತ್ತದೆ.

ಡಿಜಿಟಲ್ ವಿರಾಮ ಎಂದರೆ ಜಗತ್ತಿನಿಂದ ದೂರವಾಗುವುದು ಅಲ್ಲ. ಅದು ಸ್ವಲ್ಪ ಸಮಯ ನಿಮ್ಮನ್ನು ನೀವು ಮತ್ತೆ ಸಂಪರ್ಕಿಸುವ ಅವಕಾಶ ಅಷ್ಟೆ.

Must Read