March 3, 2026
Tuesday, March 3, 2026
spot_img

ಸಚಿನ್‌ ತೆಂಡೂಲ್ಕರ್‌ ಮನೆಯಲ್ಲಿ ಸಂಭ್ರಮ, ಅರ್ಜುನ್‌ ಮದುವೆಯ ಶಾಸ್ತ್ರಗಳು ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಮನೆಯಲ್ಲಿ ಮದುವೆ ಸಂಭ್ರಮ ಆರಂಭವಾಗಿದೆ. ಇನ್ನೇನು ಎರಡೇ ದಿನದಲ್ಲಿ ಮಗ ಅರ್ಜುನ್‌ ತೆಂಡೂಲ್ಕರ್‌ ಮದುವೆಯಾಗಲಿದೆ.

ತನ್ನ ಗರ್ಲ್‌ಫ್ರೆಂಡ್‌ ಸಾನಿಯಾ ಚಾಂಡೋಕ್‌ ಜತೆ ಅರ್ಜುನ್‌ ಹಸೆಮಣೆ ಏರುತ್ತಿದ್ದಾರೆ. ಮುಂಬೈನಲ್ಲಿರುವ ಸಚಿನ್‌ ನಿವಾಸಕ್ಕೆ ಹೂವಿನ ಅಲಂಕಾರ ಮಾಡಲಾಗಿದೆ. ಈಗಾಗಲೇ ಎಲ್ಲ ಶಾಸ್ತ್ರಗಳು ಆರಂಭವಾಗಿವೆ.

ತಮ್ಮ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಅವರ ವಿವಾಹದ ನಿಮಿತ್ತ ಸಚಿನ್‌ ತೆಂಡೂಲ್ಕರ್‌ ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಪ್ರಮುಖ ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಈ ಸಮಾರಂಭವು 2026ರ ಮಾರ್ಚ್ 5ರಂದು ನಡೆಯುವ ನಿರೀಕ್ಷೆಯಿದೆ.

ಐಪಿಎಲ್ ತಂಡ ಮುಂಬೈ ಇಂಡಿಯನ್ಸ್, ಅರ್ಜುನ್ ಮತ್ತು ಸಾನಿಯಾ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಈ ವಿಡಿಯೊ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಮಗ ಮೊದಲ ಬಾರಿಗೆ ಸಾನಿಯಾರನ್ನು ಮನೆಗೆ ಕರೆದುಕೊಂಡು ಬಂದಿದ್ದ. ಯಾವುದೇ ಹುಡುಗ ತನ್ನ ಸ್ನೇಹಿತೆಯನ್ನು ಮನೆಗೆ ಕರೆದುಕೊಂಡು ಬಂದಾಗ ಆತ ಸೀರಿಯಸ್‌ ಎಂದರ್ಥ. ಅಲ್ಲದೇ ಮಗ ದೊಡ್ಡವನಾದ ಎಂದು ಅರಿತುಕೊಂಡೆ. ಇಬ್ಬರೂ ತುಂಬಾ ಅನ್ಯೂನ್ಯವಾಗಿ ಇದ್ದಾರೆ ಎಂದು ಸಚಿನ್‌ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !