ಹೊಸದಿಗಂತ ಡಿಜಿಟಲ್ ಡೆಸ್ಕ್:
ದಳಪತಿ ವಿಜಯ್ ಸದ್ಯ ರಾಜಕೀಯದಲ್ಲಿ ತೊಡಗಿದ್ದು, ಮುಂಬರುವ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ವೈಯಕ್ತಿಕ ಜೀವನದ ವಿಚಾರದಲ್ಲಿ ಸುದ್ದಿಯಲ್ಲಿದ್ದು, ವಿಜಯ್ ಅವರ ವಿವಾಹೇತರ ಸಂಬಂಧಗಳು ಮತ್ತು ಗಂಭೀರ ವೈವಾಹಿಕ ಸಮಸ್ಯೆಗಳ ಆರೋಪ ಹೊರಿಸಿ ಸಂಗೀತಾ ಇತ್ತೀಚೆಗೆ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಾರೆ.
ಆದರೆ ಈ ನಡುವೆ ಮತ್ತೊಂದು ಸುದ್ದಿ ಕೇಳಿಬಂದಿದ್ದು, ಪತ್ನಿಗೆ ಜೀವನಾಂಶ ನೀಡಿ, ಈ ಕೇಸ್ ಅನ್ನು ಇತ್ಯರ್ಥಗೊಳಿಸಲು ವಿಜಯ್ ಮುಂದಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ. ಜೀವನಾಂಶವಾಗಿ ಪತ್ನಿ ಸಂಗೀತ ಅವರಿಗೆ ಸುಮಾರು 250 ಕೋಟಿ ರೂ. ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಚುನಾವಣೆ ಹತ್ತಿರವಿರುವ ಸಮಯದಲ್ಲಿ ಈ ವಿಚ್ಛೇದನ ವಿಷಯ ದೊಡ್ಡ ರಾದ್ಧಾಂತವಾಗಬಾರದು ಎಂಬ ಉದ್ದೇಶದಿಂದ ಸಂಗೀತ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಅವರು ಈ ಮೊತ್ತವನ್ನು ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ನಟಿಯೊಂದಿಗಿನ ವಿವಾಹೇತರ ಸಂಬಂಧದ ಆರೋಪಗಳು ಸೇರಿದಂತೆ ಹಲವಾರು ಗಂಭೀರ ಹಕ್ಕುಗಳನ್ನು ಸಂಗೀತಾ ಅರ್ಜಿಯಲ್ಲಿ ನೀಡಲಾಗಿದೆ. ಆದಾಗ್ಯೂ, ಯಾವುದೇ ನಟಿಯ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ. ಕಳೆದ ಎರಡು ವರ್ಷಗಳಿಂದ ವಿಜಯ್ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದರಿಂದ ಸಂಗೀತಾ ಈ ವಿಷಯವನ್ನು ಎತ್ತಿದ್ದಾರೆ ಎಂದು ಹೇಳಲಾಗುತ್ತಿದೆ.



