ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್-ಇಸ್ರೇಲ್, ಅಮೆರಿಕ ಸಂಘರ್ಷದ ಮದ್ಯೆ ಪಾಕಿಸ್ತಾನ ಎಂಟ್ರಿಕೊಟ್ಟಿದ್ದು, ಸೌದಿ ಅರೇಬಿಯಾ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನಿರಲ್ಲ ಎಂದು ಇರಾನ್ಗೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದರ್ , ಸೌದಿ ಅರೇಬಿಯಾ ಜೊತೆ ಪಾಕಿಸ್ತಾನ ದ್ವಿಪಕ್ಷೀಯ ರಕ್ಷಣಾ ಒಪ್ಪಂದ ಹೊಂದಿದೆ. ಈ ಒಪ್ಪಂದವು ಇರಾನ್ ಗಮನಕ್ಕಿರಬೇಕು. ಇರಾನ್ನ ನಾಯಕತ್ವ ಸ್ಥಾನದಲ್ಲಿರುವ ನಮ್ಮ ಸಹೋದರರಿಗೆ ಇದನ್ನು ನೆನಪಿಸಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.
ಸೌದಿ ಅರೇಬಿಯಾ ಜೊತೆ ಪಾಕಿಸ್ತಾನ ಮಿಲಿಟರಿ ಒಪ್ಪಂದ ಹೊಂದಿದೆ. ಈ ಒಪ್ಪಂದದ ಪ್ರಕಾರ ಈ ಇಬ್ಬರಲ್ಲಿ ಯಾರ ಮೇಲೆ ಆಕ್ರಮಣವಾದರೂ ಮತ್ತೊಬ್ಬರು ನೆರವಿಗೆ ಧಾವಿಸಬೇಕು. ಹೀಗಾಗಿ ಇರಾನ್ಗೆ ಪಾಕಿಸ್ತಾನ ಎಚ್ಚರಿಕೆ ಕೊಟ್ಟಿದೆ.



