March 4, 2026
Wednesday, March 4, 2026
spot_img

T20 ವಿಶ್ವಕಪ್‌ ಮೊದಲ ಸೆಮಿಫೈನಲ್‌: ಕಿವೀಸ್ ಗೆ 170 ರನ್ ಟಾರ್ಗೆಟ್ ಕೊಟ್ಟ ಆಫ್ರಿಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

T20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 169 ರನ್​ಗಳ ಸವಾಲಿನ ಮೊತ್ತ ದಾಖಲಿಸಿದೆ. ಕಿವೀಸ್ 170 ರನ್​ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಫ್ರಿಕಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆದರೆ ಕೆಳ ಕ್ರಮಾಂಕದಲ್ಲಿ ಆಲ್​ರೌಂಡರ್ ಮಾರ್ಕೊ ಜಾನ್ಸನ್ (ಅಜೇಯ 55)​ ಸಿಡಿಸಿದ ಸ್ಫೋಟಕ ಅರ್ಧಶತಕ ತಂಡದ ಮೊತ್ತ ಹೆಚ್ಚಿಸಿತು.

ಇನ್​ಫಾರ್ಮ್ ಬ್ಯಾಟರ್​ಗಳಾದ ಕ್ವಿಂಟನ್ ಡಿಕಾಕ್ (10), ರಯಾನ್ ರಿಕಲ್ಟನ್(0), ಕೋಲ್ ಮೆಕೆಂಜಿ ಬೌಲಿಂಗ್‌ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಡೆವಾಲ್ಡ್ ಬ್ರೆವಿಸ್ ಹಾಗೂ ನಾಯಕ ಮಾರ್ಕ್ರಮ್ 3ನೇ ವಿಕೆಟ್ ಜೊತೆಯಾಟದಲ್ಲಿ 45 ರನ್​ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಆದರೆ ನಾಯಕ ಮಾರ್ಕ್ರಮ್ ಕೇವಲ 18 ರನ್​ಗಳಿಸಿ ನಿರ್ಗಮಿಸಿದರು. ಮಾರ್ಕ್ರಮ್ ಬೆನ್ನಲ್ಲೇ, 27 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 34 ರನ್​ಗಳಿಸಿದ್ದ ಡೆವಾಲ್ಡ್ ಬ್ರೆವಿಸ್ ಕೂಡ ನಿರ್ಗಮಿಸಿದರು. ವೇಗವಾಗಿ ರನ್ ಗಳಿಸುತ್ತಿದ್ದ ಡೆವಾಲ್ಡ್ ಬ್ರೆವಿಸ್ (34)ಜೇಮ್ಸ್ ನೀಶಮ್ ಔಟ್ ಮಾಡಿದರು.ಮಾರ್ಕೊ ಯಾನ್ಸೆನ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಗಳಿಸಿ ತಂಡವನ್ನು ಸಂಕಷ್ಟದಿಂದ ಹೊರತಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !