June 29, 2026
Monday, June 29, 2026
spot_img

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಹೊಡೆದುರುಳಿಸಿದ ಅಮೆರಿಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ದಕ್ಷಿಣ ಕರಾವಳಿ ಸಮೀಪ ಇರಾನ್​ನ ಯುದ್ಧನೌಕೆ IRIS Dena ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ‘ಅಂತಾರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ್ದ ಇರಾನ್ ಯುದ್ಧಹಡಗನ್ನು ಅಮೆರಿಕದ ಸಬ್‌ಮರೀನ್ ಟಾರ್ಪಿಡೋ ಮೂಲಕ ಗುರಿಯಾಗಿಸಿ ಹೊಡೆದು ಮುಳುಗಿಸಲಾಗಿದೆ’ ಎಂದು ತಿಳಿಸಿದ್ದಾರೆ. ದ್ವಿತೀಯ ವಿಶ್ವಯುದ್ಧದ ನಂತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶತ್ರು ಹಡಗನ್ನು ನೇರವಾಗಿ ಗುರಿಯಾಗಿಸಿದ ಮೊದಲ ಘಟನೆ ಇದು ಎಂದು ಅವರು ಹೇಳಿದ್ದಾರೆ.

ಯುದ್ಧನೌಕೆ ನಾಶ ಹಿನ್ನೆಲೆ ನೂರಾರು ನಾವಿಕರು ನಾಪತ್ತೆಯಾಗಿದ್ದಾರೆ. ಹಲವರು ಸಾವಿಗೀಡಾಗಿದ್ದಾರೆ. ನಮ್ಮ ಜಲಾಂತರ್ಗಾಮಿ ಟಾರ್ಪಿಡೊ ಇರಾನ್​ ಯುದ್ಧ ನೌಕೆಯನ್ನು ಹೊಡೆದು ಮುಳುಗಿಸಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಬುಧವಾರ ತಿಳಿಸಿದ್ದಾರೆ.

ಅದಾಗ್ಯೂ ಅಮೆರಿಕ ಮೃತರ ಸಂಖ್ಯೆಯನ್ನು ದೃಢಪಡಿಸಿಲ್ಲ. ಇರಾನ್ ವಿರುದ್ಧದ ಯುದ್ಧವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವುದನ್ನು ಈ ಮೂಲಕ ಅಮೆರಿಕ ಸ್ಪಷ್ಟಪಡಿಸಿದೆ.

ಶ್ರೀಲಂಕಾ ಹೇಳಿದ್ದೇನು?
ಶ್ರೀಲಂಕಾದ ವಿದೇಶಾಂಗ ಸಚಿವ ವಿಜಿತಾ ಹೆರಾತ್ ಸಂಸತ್ತಿಗೆ ಮಾಹಿತಿ ನೀಡಿ,ಇರಾನಿನ ಹಡಗಿನಲ್ಲಿ ಸುಮಾರು 180 ಜನರು ಇದ್ದರು. ಶ್ರೀಲಂಕಾದ ಕರಾವಳಿಯಿಂದ ಸುಮಾರು 40 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ದಾಳಿ ನಡೆದಿದೆ. ಬುಧವಾರ (ಮಾರ್ಚ್‌ 4) ಬೆಳಗ್ಗೆ 5.08ಕ್ಕೆ ಇರಾನ್ ಹಡಗಿನಿಂದ ತುರ್ತು ಸಂದೇಶ ಬಂದಿತ್ತು. ಬಳಿಕ ರಕ್ಷಣೆಗಾಗಿ 2 ಹಡಗನ್ನು ಕಳುಹಿಸಲಾಯಿತು’ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !