March 13, 2026
Friday, March 13, 2026
spot_img

World Sleep Day | ಇವತ್ತು ವಿಶ್ವ ನಿದ್ರಾ ದಿನ ಅಂತೆ, ಅದಿಕ್ಕೆ ಅನ್ಸುತ್ತೆ ಸಿಕ್ಕಾಪಟ್ಟೆ ನಿದ್ದೆ ಬರ್ತಿರೋದು

ಬೆಳಿಗ್ಗೆ ಅಲಾರಂ ಆದ್ರೂ ಇನ್ನೂ ಐದು ನಿಮಿಷ ಅಂತ ಮತ್ತೆ ಹೊದಿಕೆ ಒಳಗೆ ನುಗ್ಗುವವರೇ ಹೆಚ್ಚು. ಕೆಲವೊಮ್ಮೆ ಯಾಕೋ ಗೊತ್ತಿಲ್ಲ ಕಣ್ಣು ತೆರೆಯೋ ಮನಸ್ಸೇ ಆಗೋದಿಲ್ಲ. ಅಷ್ಟು ಸುಖವಾಗಿ ನಿದ್ರೆ ಹಿಡಿದಿರುತ್ತದೆ. ಅಂಥ ದಿನಕ್ಕೂ ಒಂದು ಸ್ಪೆಷಲ್ ಡೇ ಇದೆ ಹೌದು, ಇಂದು ವಿಶ್ವ ನಿದ್ರಾ ದಿನ! ನಿದ್ದೆ ಎಂದರೆ ಕೆಲವರಿಗೆ ಆಲಸ್ಯದ ಚಿಹ್ನೆಯಂತೆ ಕಾಣಬಹುದು, ಆದರೆ ಆರೋಗ್ಯಕರ ಜೀವನಕ್ಕೆ ಇದು ಅತ್ಯಗತ್ಯವಾದ ಒಂದು ಭಾಗ. ಸರಿಯಾದ ನಿದ್ರೆ ಇಲ್ಲದೆ ದೇಹವೂ ಮನಸ್ಸೂ ಸರಿಯಾಗಿ ಕೆಲಸ ಮಾಡುವುದೇ ಕಷ್ಟ. ಅದಕ್ಕಾಗಿಯೇ ಪ್ರತಿವರ್ಷ ನಿದ್ರೆಯ ಮಹತ್ವವನ್ನು ನೆನಪಿಸಲು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ನಿದ್ರಾ ದಿನದ ಇತಿಹಾಸ

ವಿಶ್ವ ನಿದ್ರಾ ದಿನವನ್ನು ಮೊದಲ ಬಾರಿ 2008ರಲ್ಲಿ World Sleep Society ಸಂಸ್ಥೆ ಆರಂಭಿಸಿತು. ನಿದ್ರೆಯ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಮೂರನೇ ಶುಕ್ರವಾರ ಈ ದಿನವನ್ನು ಆಚರಿಸಲಾಗುತ್ತದೆ. ನಿದ್ರೆಯ ಮಹತ್ವ, ನಿದ್ರಾ ವ್ಯಾಧಿಗಳು ಮತ್ತು ಆರೋಗ್ಯಕರ ಜೀವನಶೈಲಿ ಕುರಿತು ಜಾಗೃತಿ ಮೂಡಿಸುವುದೇ ಇದರ ಪ್ರಮುಖ ಗುರಿ.

ಒಳ್ಳೆಯ ನಿದ್ರೆ ಏಕೆ ಮುಖ್ಯ?

ಒಳ್ಳೆಯ ನಿದ್ರೆ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ದಿನಪೂರ್ತಿ ಕೆಲಸ ಮಾಡಿದ ನಂತರ ದೇಹದ ಸ್ನಾಯುಗಳು ಮತ್ತು ಮೆದುಳು ಪುನಃ ಶಕ್ತಿಯನ್ನು ಸಂಗ್ರಹಿಸಿಕೊಳ್ಳಲು ನಿದ್ರೆ ಸಹಾಯ ಮಾಡುತ್ತದೆ. ಸರಿಯಾದ ನಿದ್ರೆ ಪಡೆದರೆ ಮನಸ್ಸು ಚುರುಕಾಗಿರುತ್ತದೆ, ಏಕಾಗ್ರತೆ ಹೆಚ್ಚುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ನಿದ್ರೆಯ ಕೊರತೆಯಿಂದ ತಲೆನೋವು, ಕೋಪ, ದೌರ್ಬಲ್ಯ ಮತ್ತು ಆರೋಗ್ಯ ಸಮಸ್ಯೆಗಳು ಕಾಣಿಸಬಹುದು.

ಇದನ್ನೂ ಓದಿ:

ಆದ್ದರಿಂದ ಪ್ರತಿದಿನ ಕನಿಷ್ಠ 7–8 ಗಂಟೆಗಳ ನಿದ್ರೆ ಪಡೆಯುವುದು ಅಗತ್ಯ. ಉತ್ತಮ ನಿದ್ರೆ ಇದ್ದರೆ ಮಾತ್ರ ಆರೋಗ್ಯಕರ ಜೀವನ ಸಾಧ್ಯ ಎಂಬುದು ವೈದ್ಯರ ಮಾತು. ಕೆಲವೊಮ್ಮೆ “ಸ್ವಲ್ಪ ಹೆಚ್ಚು ನಿದ್ರೆ ಮಾಡೋಣ” ಅನ್ನೋದು ದೇಹದ ಬೇಡಿಕೆಯೇ ಆಗಿರಬಹುದು, ಆದ್ರೆ ಅದನ್ನು ನಿರ್ಲಕ್ಷ್ಯ ಮಾಡ್ಬೇಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !