March 13, 2026
Friday, March 13, 2026
spot_img

ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ, ಮಹಿಳೆಯರ ವೃತ್ತಿಜೀವನಕ್ಕೆ ಹೊಡೆತ: ಸುಪ್ರೀಂ ಕೋರ್ಟ್ ಕಳವಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ, ಅದು ಮಹಿಳೆಯರ ಉದ್ಯೋಗಾವಕಾಶಗಳಿಗೆ ಧಕ್ಕೆಯಾಗಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜ್ಯಗಳು ಮುಟ್ಟಿನ ರಜೆ ನಿಯಮಗಳನ್ನು ರೂಪಿಸಲು ನಿರ್ದೇಶನ ಕೋರಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ ಅರ್ಜಿಯನ್ನು ಇಂದು(ಮಾರ್ಚ್​13)ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠ , ಖಾಸಗಿ ಕಂಪೆನಿಗಳು ಸ್ವಯಂಪ್ರೇರಿತವಾಗಿ ಮುಟ್ಟಿನ ರಜೆ ನೀಡಿದರೆ, ಅದು ಅತ್ಯುತ್ತಮ ಕ್ರಮವಾಗಬಹುದು. ಆದರೆ ಅದನ್ನು ಕಾನೂನಿನ ಮೂಲಕ ಕಡ್ಡಾಯಗೊಳಿಸಿದರೆ, ಕಂಪೆನಿಗಳು ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದು. ಯಾರೂ ಮಹಿಳೆಯರಿಗೆ ಕೆಲಸ ಕೊಡುವುದಿಲ್ಲ, ಮಹಿಳೆಯರ ವೃತ್ತಿಜೀವನವೇ ಎಂಡ್‌ ಆಗಬಹುದು. ‘ಮನೆಯಲ್ಲೇ ಕುಳಿತುಕೊಳ್ಳಿ’ ಎಂದು ಹೇಳುವ ಪರಿಸ್ಥತಿ ಬರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಕಾನೂನು ರೂಪಿಸಿದರೆ ಉದ್ಯೋಗಸ್ಥ ಮಹಿಳೆಯರಲ್ಲಿ ಪುರುಷರಿಗಿಂತ ನಾವು ಕಡಿಮೆ ಇದ್ದೇವೆ ಎಂಬ ಭಾವನೆ ಬರಬಹುದು. ಉದ್ಯೋಗದಾತರ ಮನಸ್ಥಿತಿ ನಿಮಗೆ ತಿಳಿದಿಲ್ಲ. ಮುಟ್ಟಿನ ಆರೋಗ್ಯದ ಕಾಳಜಿ ಮುಖ್ಯವಾದರೂ, ಕಡ್ಡಾಯಗೊಳಿಸುವ ಕಾನೂನನ್ನು ತಂದ ತಕ್ಷಣ ಮಹಿಳೆಯರನ್ನು ಅವರು ನೇಮಿಸಿಕೊಳ್ಳದೇ ಇರುವ ಸಾಧ್ಯತೆಗಳಿದೆ ಎಂದು ಪೀಠ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು. ಅರ್ಜಿ ವಜಾಗೊಳಿಸಿದರೂ ಕೇಂದ್ರ ಸರ್ಕಾರ ಈ ಬಗ್ಗೆ ನೀತಿ ರೂಪಿಸುವಂತೆ ನಿರ್ದೇಶಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !