September 20, 2026
Sunday, September 20, 2026
spot_img

ಬಾಲ್ಯದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಕುಲದೀಪ್​ ಯಾದವ್!​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ ಆಟಗಾರ ಕುಲದೀಪ್ ಯಾದವ್ ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಉತ್ತರಾಖಂಡದ ಮಸ್ಸೂರಿಯ ಐಷಾರಾಮಿ ರೆಸಾರ್ಟ್‌ನಲ್ಲಿ ಈ ವಿವಾಹ ಕಾರ್ಯಕ್ರಮ ನೆರವೇರಿದ್ದು, ಕುಟುಂಬ ಸದಸ್ಯರು ಮತ್ತು ಅನೇಕ ಸ್ನೇಹಿತರು ಭಾಗವಹಿಸಿದ್ದರು. ಕ್ರಿಕೆಟ್ ಜಗತ್ತಿನ ಅನೇಕ ಪ್ರಮುಖ ವ್ಯಕ್ತಿಗಳು ಭಾಗವಹಿಸಿ ನವದಂಪತಿಗೆ ಶುಭ ಕೋರಿದರು.

ಕುಲ್ದೀಪ್​ ತಿಳಿ ಗುಲಾಬಿ ಬಣ್ಣದ ಶೆರ್ವಾನಿ ಧರಿಸಿದ್ದರೆ, ವಂಶಿಕಾ ಗಾಢ ಗುಲಾಬಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ವಿವಾಹಕ್ಕೂ ಮುನ್ನ ಹಲ್ಡಿ, ಮೆಹೆಂದಿ ಮತ್ತು ಸಂಗೀತದಂತಹ ಸಾಂಪ್ರದಾಯಿಕ ಸಮಾರಂಭಗಳನ್ನು ಅದ್ದೂರಿಯಾಗಿ ನಡೆಸಲಾಯಿತು, ಆಚರಣೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !