May 2, 2026
Saturday, May 2, 2026
spot_img

ಮಧ್ಯಪ್ರಾಚ್ಯ ಯುದ್ಧಕ್ಕೆ 18ನೇ ದಿನ | ಇರಾನ್‌ನ ಸೇನಾ ನೆಲೆಗಳ ಮೇಲೆ ದಾಳಿ, ರಕ್ತಸಿಕ್ತ ವಾತಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇರಾನ್‌ ಹಾಗೂ ಇಸ್ರೇಲ್‌ ನಡುವಣ ಯುದ್ಧ 18ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 24 ಗಂಟೆಗಳಲ್ಲಿ ಇರಾನ್‌ನ ಮಿಲಿಟರಿ ಬೇಸ್‌ಗಳ ಮೇಲೆ ಇಸ್ರೇಲ್‌ ತೀವ್ರ ದಾಳಿ ನಡೆಸಿದೆ.

200ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ದಾಳಿಯಾಗಿದ್ದು, ಭೂಮಿಯಲ್ಲಿ ನೆತ್ತರು ಹರಿಯುತ್ತಿದೆ. ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಗಳು, ಮಿಲಿಟರಿ ಪ್ರಧಾನ ಕಚೇರಿ, ರಕ್ಷಣಾ ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಸಂಗ್ರಹಣಾ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇರಾನ್ ಕೂಡ ಸೌದಿ ಅರೇಬಿಯಾದ ವಿಮಾನ ನಿಲ್ದಾಣ ಸೇರಿ 6 ಕಡೆ ಡ್ರೋನ್‌ಗಳ ಮೂಲಕ ದಾಳಿ ಮಾಡಿದ್ದು, ಭದ್ರತಾ ಪಡೆಗಳು ತಡೆದಿವೆ.

ಯುಎಇಯಲ್ಲಿ ದುಬೈ ಏರ್‌ಪೋರ್ಟ್ ಜತೆಗೆ ಫುಜೈರಾ ಬಂದರಿನ ಮೇಲೂ ಡ್ರೋನ್ ಅಟ್ಯಾಕ್ ಮಾಡಿದೆ. ಹೀಗಾಗಿ, ಫುಜೈರಾ ಬಂದರಿನಲ್ಲಿ ತೈಲ ಭರ್ತಿ ನಿಲ್ಲಿಸಲಾಗಿದೆ. ಅಬುದಾಬಿಯಲ್ಲಿ ಕಾರ್ ಮೇಲೆ ಮಿಸೈಲ್ ಬಿದ್ದು, ಓರ್ವ ಬಲಿಯಾಗಿದ್ದಾನೆ. ಅಲಿ ಖಮೇನಿ ಬಳಸುತ್ತಿದ್ದ ವಿಮಾನವನ್ನು ಇರಾನ್ ರಾಜಧಾನಿ ಟೆಹ್ರಾನ್‌ನ ಮೆಹರಾಬಾದ್ ಏರ್‌ಪೋರ್ಟ್‌ನಲ್ಲಿ ಇಸ್ರೇಲ್ ಧ್ವಂಸಗೊಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !