March 17, 2026
Tuesday, March 17, 2026
spot_img

ಬೇಸಿಗೆ ಶುರುವಾಗಿದೆ, ಹೊಸ AC ಖರೀದಿಸೋ ಪ್ಲಾನ್ ಇದ್ಯಾ? ಹಾಗಿದ್ರೆ ಈ ವಿಷ್ಯಗಳನ್ನು ತಿಳಿದುಕೊಳ್ಳೋದು ಬೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇಸಿಗೆ ಬಂದಾಕ್ಷಣ ಮನೆ ಹೊರಗೆ ಬಿಡಿ, ಮನೆಯೊಳಗಿನ ಬಿಸಿ ತಾಳಲಾರದಷ್ಟು ಕಷ್ಟ ಆಗುತ್ತದೆ. ಈ ಸಮಯದಲ್ಲಿ ಹಲವರು ಹೊಸ AC ಖರೀದಿಸಲು ಯೋಚಿಸುತ್ತಾರೆ. ಆದರೆ ಸರಿಯಾದ ಮಾಹಿತಿ ಇಲ್ಲದೇ ಖರೀದಿ ಮಾಡಿದರೆ ಹೆಚ್ಚು ಖರ್ಚು ಆಗೋ ಸಾಧ್ಯತೆ ಇದೆ. ಆದ್ದರಿಂದ ಕೆಲವು ಮುಖ್ಯ ವಿಚಾರಗಳನ್ನು ತಿಳಿದುಕೊಂಡರೆ ನಿಮ್ಮ ಆಯ್ಕೆ ಉತ್ತಮವಾಗಿರಬಹುದು.

ಕೊಠಡಿ ಗಾತ್ರಕ್ಕೆ ತಕ್ಕ AC ಆಯ್ಕೆ: ಚಿಕ್ಕ ರೂಂಗೆ ದೊಡ್ಡ AC ಬೇಡ, ದೊಡ್ಡ ರೂಂಗೆ ಚಿಕ್ಕ AC ಬೇಡ. ನಿಮ್ಮ ಕೊಠಡಿ ಗಾತ್ರಕ್ಕೆ ತಕ್ಕ ಟನ್ ಸಾಮರ್ಥ್ಯ ಆಯ್ಕೆ ಮಾಡಿದರೆ ಉತ್ತಮ ಕೂಲಿಂಗ್ ಸಿಗುತ್ತದೆ.

ಸ್ಟಾರ್ ರೇಟಿಂಗ್ ಗಮನಿಸಿ: 5 ಸ್ಟಾರ್ AC ವಿದ್ಯುತ್ ಬಳಕೆ ಕಡಿಮೆ ಮಾಡುತ್ತದೆ. ಆರಂಭದಲ್ಲಿ ಬೆಲೆ ಹೆಚ್ಚು ಇದ್ದರೂ, ಮುಂದಿನ ದಿನಗಳಲ್ಲಿ ಕರಂಟ್ ಬಿಲ್ ಕಡಿಮೆಯಾಗುತ್ತದೆ.

ಇನ್ವರ್ಟರ್ ಟೆಕ್ನಾಲಜಿ: ಇನ್ವರ್ಟರ್ AC ಹೆಚ್ಚು ಪರಿಣಾಮಕಾರಿ. ಇದು ಅಗತ್ಯಕ್ಕೆ ತಕ್ಕಂತೆ ಕೂಲಿಂಗ್ ಹೊಂದಿಸಿಕೊಳ್ಳುತ್ತದೆ ಮತ್ತು ವಿದ್ಯುತ್ ಉಳಿಸುತ್ತದೆ.

ಇದನ್ನೂ ಓದಿ:

ಬ್ರ್ಯಾಂಡ್ ಮತ್ತು ಸರ್ವಿಸ್: ಒಳ್ಳೆಯ ಬ್ರ್ಯಾಂಡ್ ಆಯ್ಕೆ ಮಾಡಿದರೆ ಸರ್ವಿಸ್ ಸಮಸ್ಯೆಗಳು ಕಡಿಮೆ. ವಾರಂಟಿ ಮತ್ತು ಸರ್ವಿಸ್ ಸೆಂಟರ್ ಲಭ್ಯತೆ ಪರಿಶೀಲಿಸಿ.

ಹೆಚ್ಚುವರಿ ಫೀಚರ್ಸ್: ಡಸ್ಟ್ ಫಿಲ್ಟರ್, ಸ್ಮಾರ್ಟ್ ಕಂಟ್ರೋಲ್, ಸ್ಲೀಪ್ ಮೋಡ್ ಮುಂತಾದ ಫೀಚರ್ಸ್ ನಿಮ್ಮ ಅನುಭವವನ್ನು ಮತ್ತಷ್ಟು ಸುಧಾರಿಸುತ್ತವೆ.

ಈ ಸರಳ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡರೆ, ನೀವು ನಿಮ್ಮ ಬಜೆಟ್‌ಗೆ ತಕ್ಕ ಉತ್ತಮ AC ಆಯ್ಕೆ ಮಾಡಿ ಬೇಸಿಗೆಯನ್ನು ಸುಖಕರವಾಗಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !