ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿರುವ ಭಾರತ ತಂಡ ಇನ್ನು ಕೆಲವೇ ದಿನಗಳಲ್ಲಿ ನಡೆಯುವ ಐಪಿಎಲ್‌ಗೆ ಸಜ್ಜಾಗುತ್ತಿದ್ದು, ಈಗಾಗಲೇ ಮೈದಾನದಲ್ಲಿ ಭರ್ಜರಿ ತಾಲೀಮು ಶುರುವಾಗಿದೆ.
ಇದರ ಬೆನ್ನಲ್ಲೇ ಟೀಂ ಇಂಡಿಯಾ ಮುಂದಿನ ಟಿ20 ಸರಣಿಗೆ ಕೂಡಾ ಸಿದ್ಧಗೊಳ್ಳಬೇಕಿದ್ದು, ಬಿಸಿಸಿಐ ಈಗಾಗಲೇ ಇದರ ವೇಳಾಪಟ್ಟಿಯನ್ನು ಪ್ರಕಟಿಸಿದೆ,
ಸೂರ್ಯ ಬಳಗವು ಐಪಿಎಲ್ ಮುಗಿದ ಬಳಿಕ ಐರ್ಲೆಂಡ್ ವಿರುದ್ಧ ಮೂರು ಟಿ20 ಸರಣಿ ಆಡಲಿದ್ದು, ಜೂನ್ ಅಂತ್ಯದಲ್ಲಿ ಈ ಸರಣಿ ಶುರುವಾಗುವ ಸಾಧ್ಯತೆಯಿದೆ. ಈ ಸರಣಿ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಹೊಗಳಿದ್ದು, ಜುಲೈ ನಲ್ಲಿ ಐದು ಟಿ20 ಸರಣಿ ಹಾಗೂಮೂರು ಏಕದಿನ ಸರಣಿ ನಡೆಯಲಿದೆ.
ಜುಲೈ 1, 4, 7, 9 ಮತ್ತು 11 ರಂದು ಇಂಗ್ಲೆಂಡ್ ವಿರುದ್ಧ ಟಿ೨೦ ಸರಣಿ ಆಡಲಿದ್ದು, ಬಳಿಕ ಜುಲೈ 14 ರಂದು ಏಕದಿನ ಸರಣಿ ಆರಂಭವಾಗಲಿದೆ. ಈ ಪಂದ್ಯಗಳ ಮುನ್ನ ಐರ್ಲೆಂಡ್ ಜೊತೆ ಟಿ20 ಸರಣಿ ನಡೆಯಬೇಕಿದ್ದು, ಶೀಘ್ರದಲ್ಲೇ ಡೇಟ್ ಘೋಷಣೆಯಾಗಲಿದೆ.



