March 23, 2026
Monday, March 23, 2026
spot_img

ಐದು ದಿನಗಳ ಕದನ ವಿರಾಮ: ಇರಾನ್ ಮೇಲಿನ ದಾಳಿಯ ಡೆಡ್ ಲೈನ್ ನಿಂದ ಹಿಂದೆ ಸರಿದ ಟ್ರಂಪ್?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಜಗತ್ತೇ ತತ್ತರಿಸಿದ್ದು, ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ದದಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ.

ಈ ಕುರಿತು ಖುದ್ದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಮಾಹಿತಿ ನೀಡಿದ್ದು, ಕಳೆದ ಎರಡು ದಿನಗಳಿಂದ ನಡೆದ ಮಾತುಕತೆ ಸಫಲವಾಗಿದ್ದು, ಮುಂದಿನ ಐದು ದಿನಗಳ ಕಾಲ ಇರಾನ್ ಮೇಲಿನ ದಾಳಿಯನ್ನು ನಿಲ್ಲಿಸುವುದಾಗಿ ಘೋಷಿಸಿದ್ದಾರೆ.

ಇತ್ತೀಚೆಗೆ ಇರಾನ್‌ನ ಇಂಧನ ಮೂಲಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನೆಲಸಮಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದ ಟ್ರಂಪ್, ಇದೀಗ ತನ್ನ ಮಾತಿನ ವರಸೆ ಬದಲಾಯಿಸಿದ್ದು, ಇರಾನ್ ಜೊತೆಗಿ ಆಳವಾದ ಚರ್ಚೆ ಹಾಗು ಮಾತುಕತೆಯ ಬಳಿಕ ತನ್ನ ನಿರ್ಧಾರ ಬದಲಾಗಿದ್ದು, ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಇಂಧನ ಘಟಕದ ಮೇಲಿನ ದಾಳಿಯನ್ನು ಐದು ದಿನಗಳ ಕಾಲ ಮುಂದೂಡುವಂತೆ ಇಲಾಖೆಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !